ವಿದೇಶ

ಮನುಷ್ಯನ ಜೀವ ತೆಗೆದ ರೋಬೋ

Vishwanath S

ಬರ್ಲಿನ್: ಮನುಷ್ಯ ತನ್ನ ಅನುಕೂಲಕ್ಕಾಗಿ ಸೃಷ್ಟಿಸಿದ ರೋಬೋಟ್  ಓರ್ವ ಜೀವವನ್ನೇ ತೆಗೆದಿದೆ.

ಮನುಷ್ಯ ಸೃಷ್ಟಿಸಿದ ಉಪಕರಣಗಳನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ಅದು ಆತನ ಜೀವಕ್ಕೇ ಕುತ್ತು ತಂದಿರುವ ಪ್ರತ್ಯಕ್ಷ ಸಾಕ್ಷಿ ಬರ್ಲಿನ್ ನಲ್ಲಿ ನಡೆದಿದೆ.

ಫ್ರಾಂಕ್ಫರ್ಟ್ ನ ವೋಲ್ಕ್ಸ್ ವ್ಯಾಗನ್ ಪ್ರೊಡಕ್ಷನ್ ಪ್ಲಾಂಟ್ ನಲ್ಲಿ ಸರಿಯಾಗಿ ಕಮಾಂಡ್ ಮಾಡದ 22 ವರ್ಷದ ಕಂಟ್ರ್ಯಾಕ್ಟರನ್ನು ರೋಬೋಟ್ ಹೊಡೆದು ಕೊಂದಿರುವ ಘಟನೆ ಜರ್ಮನಿಯಲ್ಲಿ ನಡೆದಿದೆ.

ಪ್ಲಾಂಟ್ ನಲ್ಲಿ ಬಳಸಲಾಗುತ್ತಿದ್ದ ಸ್ಟೇಷನರಿ ರೊಬೋಟ್ ಕಂಟ್ರ್ಯಾಕ್ಟರನ್ನು ಹಿಡಿದೆಳೆದು ಲೋಹದ ಪ್ಲೇಟ್ ಗೆ ಅಪ್ಪಳಿಸಿದೆ. ಇದಕ್ಕೆ ಕಾರಣ ರೋಬೋಟ್ ಮಾಡಲಾಗಿದ್ದ ಪ್ರೋಗ್ರಾಮಿಂಗ್ ನ ತಪ್ಪು ಎಂದು ತಿಳಿದುಬಂದಿದೆ. ಅಸೆಂಬ್ಲಿಂಗ್ ಪ್ರೋಸೆಸ್ ನಲ್ಲಿ ಬಳಸಲಾಗುತ್ತಿದ್ದ ಈ ರೋಬೋಟ್ ಗೆ ಪ್ರೋಗ್ರಾಮಿಂಗ್ ಗೆ ತಕ್ಕಂತೆ ಕಮಾಂಡ್ ನೀಡದಿರುವುದರಿಂದ ಈ ಸಮಸ್ಯೆ ಸಂಭವಿಸಿದೆ.

SCROLL FOR NEXT