ಶಾಂಘೈ: ಸ್ಟ್ರಿಂಗ್ ಆಫ್ ಪರ್ಲ್ಸ್ ನ ನೆಲೆಯಲ್ಲಿ ಭಾರತವನ್ನು ಸುತ್ತುವರೆಯುವುದಕ್ಕೆ ಸಾಧ್ಯವಿಲ್ಲ ಎಂದು ಚೀನಾ ಹೇಳಿದೆ.
ಪಾಕಿಸ್ತಾನ, ಶ್ರೀಲಂಕಾ ಬಾಂಗ್ಲಾ ದೇಶ ಸೇರಿದಂತೆ ಹಲವು ದೇಶಗಳಿಗೆ ತೆರಳುತ್ತಿರುವ ಚೀನಾದ ನೌಕಾ ಹಡಗುಗಳ ಬಗ್ಗೆ ಭಾರತ ಭಯ ಪಡಬೇಕಾದ ಕಾರಣಗಳಿಲ್ಲ ಎಂದು ಚೀನಾದ ಪಿಎಲ್ಎ ನೌಕಾದಳದ ಉನ್ನತ ಅಧಿಕಾರಿ ವೀ ಕ್ಸಿಯಾವೋ ಡಾಂಗ್ ಹೇಳಿಕೆದ್ದಾರೆ. ಅಲ್ಲದೇ ತಾನು ಪ್ರಾಬಲ್ಯ ಮೆರೆಯುವ ನಿಯಮಾವಳಿಗಳನ್ನು ಅನುಸರಿಸುತ್ತಿಲ್ಲ ಎಂದೂ ಚೀನಾ ಸ್ಪಷ್ಟಪಡಿಸಿದೆ.
ಸ್ಟ್ರಿಂಗ್ ಆಫ್ ಪರ್ಲ್ಸ್ ನೆಲೆಯಲ್ಲಿ ಭಾರತವನ್ನು ಸುತ್ತುವರೆಯುವುದಕ್ಕೆ ಚೀನಾಗೆ ಸಾಧ್ಯವಿಲ್ಲ ಎಂದು ವೀ ಕ್ಸಿಯಾವೋ ಡಾಂಗ್ ಹೇಳಿದ್ದಾರೆ. ರಕ್ಷಣಾತ್ಮಕ ವಿಧಾನವನ್ನು ಚೀನಾ ನಂಬಿದ್ದು, ಇತರ ದೇಶಗಳ ಮೇಲೆ ಪ್ರಭಾವ ಬೀರುವ ವಿಸ್ತರಣಾವಾದದಲ್ಲಿ ನಂಬಿಕೆ ಇಲ್ಲ ಭಾರತ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದೆ.
ಒಂದು ವೇಳೆ ಪಾಕಿಸ್ತಾನಕ್ಕೆ ಭೇಟಿಯನ್ನು ಕಡಿಮೆಗೊಳಿಸಿದರೆ, ನಾವು ಭಾರತಕ್ಕೆ ಹೆಚ್ಚಿನ ನೆರವು ನೀಡುತ್ತಿರುವುದಾಗಿ ಪಾಕಿಸ್ತಾನ ಆತಂಕಗೊಳ್ಳುತ್ತದೆಯೇ ಎಂದು ಚೀನಾ ಪ್ರಶ್ನಿಸಿದೆ. ಪಾಕಿಸ್ತಾನಕ್ಕೆ ತನ್ನ ನೌಕಾ ಹಡಗುಗಳು ತೆರಳುತ್ತಿರುವುದನ್ನು ಭಾರತ ಆತಂಕದ ದೃಷ್ಟಿಯಿಂದ ನೋಡುತ್ತಿದೆ. ಆದರೆ ಚೀನಾ ಭಾರತದೊಂದಿಗೂ ಬಾಂಧವ್ಯವನ್ನು ಉತ್ತಮಗೊಳಿಸಿದೆ ಎಂದು ಚೀನಾ ಸ್ಪಷ್ಟಪಡಿಸಿದೆ.