ಯುಫ್ಎ(ರಷ್ಯಾ): ಬ್ರಿಕ್ಸ್ ಶೃಂಗಸಭೆ ಪ್ರಯುಕ್ತ ರಷ್ಯಾಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ರನ್ನು ಭೇಟಿ ಮಾಡಲಿದ್ದಾರೆ.
ಕಳೆದ ಮೇ ನಂತರ ಉಭಯ ನಾಯಕರು ಇದೇ ಮೊದಲ ಬಾರಿಗೆ ಭೇಟಿಯಾಗಲಿದ್ದು, ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಶಾಂಘೈ ಸಹಕಾರಿ ಒಕ್ಕೂಟ(ಎಸ್ಸಿಒ) ಶೃಂಗ ಸಭೆಯಲ್ಲಿ ಶುಕ್ರವಾರ ಬೆಳಗ್ಗೆ 9.45ಕ್ಕೆ ಉಭಯ ನಾಯಕರು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಉಭಯ ದೇಶಗಳು ದೃಢಪಡಿಸಿವೆ.
ಇದೇ ವೇಳೆ 26/11ರ ಮುಂಬೈ ದಾಳಿ ಸಂಚುಕೋರ ಝಾಕಿ-ಉರ್ ರೆಹಮಾನ್ ಲಖ್ವಿ ಬಿಡುಗಡೆ ವಿಚಾರ ಪ್ರಸ್ತಾಪಿಸುವ ಸಾಧ್ಯತೆಯಿದೆ.