ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಆಫ್ಘಾನ್-ಪಾಕ್ ಐಸಿಸ್ ಮುಖ್ಯಸ್ಥ ಸಯೀದ್ ಸಾವು

ಆಫ್ಘಾನಿಸ್ತಾನ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಐಸಿಸ್ ಉಗ್ರ ಸಂಘಟನೆಯ ನೇತೃತ್ವ ವಹಿಸಿದ್ದ ಹಫೀಜ್ ಸಯೀದ್ ವೈಮಾನಿಕ ದಾಳಿಯಲ್ಲಿ...

ಹಫೀಜ್ ಸಯೀದ್
Mainashree
Updated On : 12 Jul 2015, 12:06 pm

ಕಾಬೂಲ್: ಆಫ್ಘಾನಿಸ್ತಾನ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಐಸಿಸ್ ಉಗ್ರ ಸಂಘಟನೆಯ ನೇತೃತ್ವ ವಹಿಸಿದ್ದ ಹಫೀಜ್ ಸಯೀದ್ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾನೆ.

ಆಫ್ಘಾನ್ ಗುಪ್ತಚರ ಸಂಸ್ಥೆಗಳು ಹಾಗೂ ಉಗ್ರ ಕಮಾಂಡರ್‍ಗಳು ಈ ವಿಚಾರವನ್ನು ದೃಢಪಡಿಸಿದ್ದಾರೆ. ನಂಗಾರ್‍ಹರ್ ಪ್ರಾಂತ್ಯದಲ್ಲಿ ಶುಕ್ರವಾರ ಅಮೆರಿಕ ನಡೆಸಿದ ವೈಮಾನಿಕ ದಾಳಿಗೆ 30 ಮಂದಿ ಐಸಿಸ್ ಉಗ್ರರು ಬಲಿಯಾಗಿದ್ದಾರೆ.

ಆ ಪೈಕಿ ಸಯೀದ್ ಕೂಡ ಸೇರಿದ್ದಾನೆ ಎಂದು ಸಿಎನ್ ಎನ್ ಐಬಿಎನ್ ವರದಿ ಮಾಡಿದೆ. ಉಗ್ರ ಕಮಾಂಡರ್‍ಗಳ ಸಭೆ ನಡೆಯುತ್ತಿದ್ದ ಸಮಯದಲ್ಲೇ ಈ ದಾಳಿ ನಡೆದಿದೆ. ಕಳೆದ ಸೋಮವಾರ ಅಮೆರಿಕ ನಡೆಸಿದ ವೈಮಾನಿಕ ದಾಳಿಯಿಂದ 49 ಮಂದಿ ಮೃತಪಟ್ಟಿದ್ದರು ಎಂದೂ ವರದಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement