ಲಂಡನ್: ಸ್ಮಾರ್ಟ್ ಫೋನ್ ಗಳು ಬಂದ ನಂತರ ಯುವ ಜನತೆಯಲ್ಲಿ ಸೆಲ್ಫಿ ತೆಗೆಯುವ ಚಾಳಿ ಸರ್ವವ್ಯಾಪ್ತಿಯಾಗಿದೆ. ತಮ್ಮ ಫೋಟೋಗಳನ್ನು ತಾವೆ ತೆಗೆದು ಸಾಮಾಜಿಕ ತಾಣಗಳಲ್ಲಿ ಪ್ರಕಟಿಸಿಕೊಳ್ಳುವ ಚಾಳಿಗೆ ಬಿದ್ದ ಲಂಡನ್ ಯುವಕನೊಬ್ಬ ನಿಷೇಧಿತ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆದ ಪರಿಣಾಮ ಜೈಲು ಪಾಲಾಗಿದ್ದಾನೆ.
ಉತ್ತರ ಲಂಡನ್‌ನ ಬಾರ್ನೆಟ್ ನ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿ ಪ್ರಯಾಣಿಕರ ರಕ್ಷಣಾ ಕಾರ್ಯ ಪ್ರಗತಿಯಲ್ಲಿದ್ದ ವೇಲೆ ಯುವಕ ಸೆಲ್ಫಿ ಫೋಟೋ ತೆಗೆದುಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಯುವಕ ಜೈಲು ಪಾಲಾಗಿದ್ದಾನೆ.
ಕಾರೊಂದು ದೊಡ್ಡ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಈ ವೇಳೆ ಕಾರಿನಲ್ಲಿದ್ದ ಚಾಲಕ ಮತ್ತು ಇಬ್ಬರು ಪ್ರಯಾಣಿಕರನ್ನು ಹೊರಗೆಳೆಯಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ರಕ್ಷಣಾ ಪಡೆಗಳು ಗಂಟೆಗೂ ಅಧಿಕಕಾಲ ಹರಸಾಹಸ ಪಡೆಬೇಕಾಯಿತು. ಇಂತಹ ತುರ್ತು ಕಾರ್ಯಾಚರಣೆಗೆ ಅಡ್ಡಿ ಎಂಬಂತೆ ತರತರದ ಸೆಲ್ಫಿ ಹೊಡೆಸಿಕೊಳ್ಳುತ್ತಿದ್ದ ಯುವಕ ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.