ವಿದೇಶ

ಸರಿದ ಕಾರ್ ಮೋಡ, ಬದುಕಿದ ಪುಟ್ಟ ಜೀವ

Rashmi Kasaragodu

ಯಿವು(ಚೀನಾ): ದುಬಾರಿ ಕಾರಿನ ಮೇಲಿನ ಪ್ರೀತಿಗೆ ಹೆತ್ತ ಮಗುವಿನ ಜೀವವನ್ನೇ ಒತ್ತೆ ಇಟ್ಟ ಘಟನೆ ಇದು. ಒಳಗಿದ್ದ ಮಗುವಿನ ಅಳು ತಾಯಿಕರುಳಿಗೆ ಚುರುಕು ಮುಟ್ಟಿಸಲಿಲ್ಲವೇ
ಎಂಬ ಪ್ರಶ್ನೆ ಕೂಡ ಎದ್ದಿದೆ.ಯಾಕಂದ್ರೆ ಇವಳ ಮಾತು ಕೇಳಿದ್ರೆ, ಅವಳದ್ದೇ ಕರುಳ ಬಳ್ಳಿ ಇಷ್ಟೊತ್ತಿಗೆ ಇಲ್ಲವಾಗಿ ಬಿಡುತ್ತಿತ್ತು. ಇದು ಚೀನಾದ ಝೆಜಿಯಾಂಗ್ ಪ್ರಾಂತ್ಯದ ಯಿವು ನಗರದಲ್ಲಿ ನಡೆದ ಘಟನೆ. ಸಿಸಿಟಿವಿಯಲ್ಲಿ ಸಂಪೂರ್ಣ ದೃಶ್ಯ ಚಿತ್ರಿತವಾಗಿದೆಯೆಂದು ಮಿರರ್ ವೆಬ್‍ಸೈಟ್ ವರದಿ ಮಾಡಿದೆ.

ಆಗಿದ್ದಿಷ್ಟು: ಹೇಳಿ ಕೇಳಿ ಅದು ಬಿಎಂಡಬ್ಲು ಕಾರ್. ಮಗುವನ್ನು ಒಳಗೆ ಬಿಟ್ಟು, ಕಾರ್‍ನ ಚಾವಿಯನ್ನೂ ಒಳಕ್ಕೇ ಬಿಟ್ಟು ತಾಯಿ ಹೊರಬಂದಿದ್ದಾಳೆ. ಕಾರ್ ಆಟೊಮ್ಯಾಟಿಕ್ ಆಗಿ ಲಾಕ್ ಆಗಿದೆ. ಗಾಳಿಯಾಡದೆ ಉಸಿರುಕಟ್ಟತೊಡಗಿದೆ.
ಅಳಲೂ ಆಗದೆ ಏದುಸಿರು ಬಿಡುತ್ತಾ ಮಗು ಬೆವರಿ ಕಣ್ಣು ಮೇಲೆ ಕೆಳಗೆ ಅದುರುತ್ತಿದೆ. ಕಾರ್ ಸುತ್ತ ಜನ ಜಮಾಯಿಸಿದ್ದಾರರೆ. ಕಾರ್ ಒಡತಿ ಮಗುವಿನ ತಾಯಿ ಕೂಡ ಆ ಗುಂಪಿನ ಮಧ್ಯದಲ್ಲೇ ನಿರಾಳವಾಗಿ ನಿಂತಿದ್ದಾಳೆ.ಅಷ್ಟೊತ್ತಿಗೆ ಅಗ್ನಿಶಾಮಕದಳದವರು ಬಂದು ``ಮಗುವನ್ನು ಆಚೆ ತರುವ ಏಕೈಕ ಮಮಾರ್ಗ ಅಂದ್ರೆ ಕಾರ್‍ನ ಕಿಟಕಿ ಗಾಜು ಒಡೆಯುವುದು'' ಎಂದಿದ್ದಾರೆ.
``ಅಯ್ಯಯ್ಯೋ... ಕಾರಿಗೇನೂ ಆಗಕೂಡದು. ಇರಿ ನಾನು ಡೂಪ್ಲಿಕೇಟ್ ಕೀ ಮಾಡೋವ್ರಿಗೆ ಕಾಲ್  ಮಾಡಿದ್ದೇನೆ. ಅವರು ಬರೋತನಕ ಕಾಯೋಣ. ಕಾರ್ ಡ್ಯಾಮೇಜ್
ಆಗಬಾರದು'' ಎಂದು ತಡೆದಿದ್ದಾಳೆ! ಆದರೆ ಅಗ್ನಿಶಾಮಕದಳದವರು, ಈ ತಾಯಿಯ ಮಾತು ಕೇಳದೇ ಕಿಟಕಿ ಒಡೆದು ಮಗು ರಕ್ಷಿಸಿದ್ದಾರೆ. ಅಲ್ಲದೆ vಈಕೆಯ ಈ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

SCROLL FOR NEXT