ಇಸ್ಲಾಮಾಬಾದ್: ಭಾರತ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದು ಪಾಕಿಸ್ತಾನವಾದರೂ ಭಾರತದ ಮೇಲೆ ಆರೋಪಿಸಿದೆ.
ಈ ವಾರದಲ್ಲಿ ನಡೆದ ಗಡಿಯಾಚೆಗಿನ ಶೆಲ್ ದಾಳಿಯಲ್ಲಿ ಕಾಶ್ಮೀರ ಪ್ರದೇಶದ 4 ನಾಗರಿಕರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಬಿ.ಎಸ್. ಎಫ್ ಯೋಧರು, ಪೂಂಚ್ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘನೆಮಾಡಿದ್ದ ಪಾಕಿಸ್ತಾನ ಸೈನಿಕರ ಮೇಲೆ ಶೆಲ್ ಗಳಿಂದ ದಾಳಿ ನಡೆಸಿದ್ದರು. ಇದಾದ ಬಳಿಕ ಪಾಕಿಸ್ತಾನ ಭಾರತದ ಮೇಲೆ ಆರೋಪ ಮಾಡಿದೆ.
ಕಳೆದ ವರ್ಷದಂತೆಯೇ ಈ ವರ್ಷವೂ ರಂಜಾನ್ ಸಂದರ್ಭದಲ್ಲಿ ಭಾರತ ಕದನ ವಿರಾಮ ಉಲ್ಲಂಘನೆ ಮಾಡಿರುವುದು ವಿಶಾದನೀಯ ಇದರಿಂದ ಅಮಾಯಕ ಜನರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ. ಪ್ರಚೋದನಕಾರಿ ಆಕ್ಟ್ ಅಡಿಯಲ್ಲಿ ಭಾರತದ ಕ್ರಮಕ್ಕೆ ತನ್ನ ವಿರೋಧವೊಡ್ಡಿದೆ.