ಭಾರತದಿಂದ ಇಸೀಸ್(ಐಎಸ್ಐಎಸ್) ಉಗ್ರ ಸಂಘಟನೆಗೆ ನೇಮಕಾತಿಗೊಂಡವರು ದೋಣಿಗಳಲ್ಲಿ ತೆರಳುತ್ತಿರುವ ಚಿತ್ರವನ್ನು ಐಸೀಸ್ ಬೆಂಬಲಿಗರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಲ್ ಹಯಾತ್ ಮಾಧ್ಯಮ ಕೇಂದ್ರ ಪ್ರಕಟಿಸಿರುವ ಇತ್ತೀಚಿನ ನೇಮಕಾತಿಗಳ ವಿಡಿಯೋದಿಂದ ಈ ಚಿತ್ರಗಳನ್ನು ಪಡೆಯಲಾಗಿದೆ. ಎರಡು ದೋಣಿಗಳಲ್ಲಿ ಶಸ್ತ್ರಧಾರಿಗಳನ್ನು ಕರೆದೊಯ್ಯಲಾಗುತ್ತಿರುವ ಹೊಸದಾಗಿ ನೇಮಕಗೊಂಡಿರುವ ಉಗ್ರರು ಭಾರತೀಯರೆಂದು ಐಸೀಸ್ ಟ್ವಿಟರ್ ಖಾತೆಯಲ್ಲಿ ತಿಳಿಸಲಾಗಿದೆ.