ಕಾರಿನಲ್ಲಿ ಮಗುವಿಗೆ ಜನ್ಮ ನೀಡಿದ ಅಮೇರಿಕಾ ಮಹಿಳೆ 
ವಿದೇಶ

ಚಲಿಸುತ್ತಿರುವ ಕಾರಿನಲ್ಲಿ ಹೆರಿಗೆ; ವಿಡಿಯೋ ಮಾಡಿದ ಗಂಡ

ಗರ್ಭಿಣಿ ಮಹಿಳೆಯರು ಪ್ರಯಾಣಿಸುವ ವೇಳೆ ಬಸ್ ನಲ್ಲಿ ಹೆರಿಗೆಯಾಗಿರುವ ಪ್ರಕರಣಗಳನ್ನು ಕೇಳಿದ್ದೀರಿ, ಅಮೆರಿಕಾದ ಹೂಸ್ಟನ್ ನಲ್ಲಿ ಮಹಿಳೆಯೊಬ್ಬರು ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

ಹೂಸ್ಟನ್: ಗರ್ಭಿಣಿ ಮಹಿಳೆಯರು ಪ್ರಯಾಣಿಸುವ ವೇಳೆ ಬಸ್ ನಲ್ಲಿ ಹೆರಿಗೆಯಾಗಿರುವ ಪ್ರಕರಣಗಳನ್ನು ಕೇಳಿದ್ದೀರಿ, ಇಂಥದ್ದೇ ಪ್ರಕರಣ ಅಮೆರಿಕಾದ ಹೂಸ್ಟನ್ ನಲ್ಲಿ ನಡೆದಿದ್ದು ಮಹಿಳೆಯೊಬ್ಬರು ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಕಾರ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ಮಾರ್ಗದ ಮಧ್ಯದಲ್ಲಿ ಹೆರಿಗೆ ನೋವು ತೀವ್ರಗೊಂಡು ಚಲಿಸುತ್ತಿದ್ದ ಕಾರಿನಲ್ಲೇ ಲೀಸಾ ಜಾನ್ ಎಂಬುವವರು ಮಗುವನ್ನು ಹಡೆದಿದ್ದಾರೆ. ಗೋ ಪ್ರೋ ಕ್ಯಾಮೆರಾ ಮೂಲಕ ಲೀಸಾ ಮಗುವಿಗೆ ಜನ್ಮ ನೀಡುತ್ತಿರುವ ದೃಶ್ಯವನ್ನು ಸೆರೆ ಹಿಡಿದು ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದಾರೆ.

ಲೀಸಾ ಹಾಗೂ ಜಾನ್ ದಂಪತಿಗಳಿಗೆ ಇದು ಮೂರನೇ ಮಗುವಾಗಿದ್ದು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಕಾರಿನಲ್ಲಿ ಹೆರಿಗೆಯಾದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಗು ಆರೋಗ್ಯವಾಗಿದ್ದು 4 .5 ಕೆ.ಜಿ ತೂಕವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸೂಚನೆ: ಈ ವಿಡಿಯೋದ ಕೆಲ ದೃಶ್ಯಗಳು ಮಕ್ಕಳ ವೀಕ್ಷಣೆಗೆ ಸಮಂಜಸವಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೋಲಾಹಲ: TMC ಬಂಡಾಯ ಗುಂಪು ಕಾಕೋಲಿ ಘೋಷ್ ನೇತೃತ್ವದಲ್ಲಿ NCP ಜೊತೆ ವಿಲೀನ!

ಜ್ವಾಲಾಮುಖಿ ಕುಳಿಗೆ ಬಿದ್ದ 'ಯೆಮೆನ್‌ನ ಸ್ಪೈಡರ್-ಮ್ಯಾನ್': ದುರಂತ ಕ್ಯಾಮೆರಾದಲ್ಲಿ ಸೆರೆ! Video

Women's T20 World Cup 2026: 'ಹನುಮಾನ್‌ ಜಿ ಮಹಾನ್'.. ಪಾಕ್ ವಿರುದ್ಧ ಗೆಲುವಿನ ಬಳಿಕ ವಾಯುಪುತ್ರನ ನೆನೆದ Deepti Sharma

Women's T20 World Cup 2026: ಪ್ರೇಕ್ಷಕರ ಸಂಖ್ಯೆಯಲ್ಲೂ ಐತಿಹಾಸಿಕ ದಾಖಲೆ ಬರೆದ India vs Pakistan ಪಂದ್ಯ!

ಉಡುಪಿ: ಸಿಎಂ ವಿಜಯ್ ಬೆನ್ನಲ್ಲೇ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಮುಖೇಶ್ ಅಂಬಾನಿ ಪುತ್ರ ಅನಂತ್ ಭೇಟಿ

SCROLL FOR NEXT