ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಒಬಾಮ ಹುಟ್ಟೂರು ಪ್ರವಾಸ ಅಂತ್ಯ

ತಂದೆಯ ಹುಟ್ಟೂರು ಕೀನ್ಯಾಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಇದೇ ಮೊದಲ ಬಾರಿಗೆ ನೀಡಿದ ಎರಡು ದಿನಗಳ ಪ್ರವಾಸ ಭಾನುವಾರ ಕೊನೆಗೊಂಡಿದೆ...

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ (ಸಂಗ್ರಹ ಚಿತ್ರ)
Srinivasa Murthy VN
Updated On : 27 Jul 2015, 11:43 am
ನೈರೋಬಿ: ತಂದೆಯ ಹುಟ್ಟೂರು ಕೀನ್ಯಾಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಇದೇ ಮೊದಲ ಬಾರಿಗೆ ನೀಡಿದ ಎರಡು ದಿನಗಳ ಪ್ರವಾಸ ಭಾನುವಾರ ಕೊನೆಗೊಂಡಿದೆ.
ಇಲ್ಲಿಂದ ಅವರು ನೇರವಾಗಿ ಮತ್ತೊಂದು ಆಫ್ರಿಕನ್ ದೇಶ ಇಥಿಯೋಪಿಯಾಗೆ ತೆರಳಿದ್ದಾರೆ. ವಿಶೇಷವೆಂದರೆ ಅಮೆರಿಕ ಅಧ್ಯಕ್ಷರೊಬ್ಬರ ಮೊದಲ ಭೇಟಿ ಇದು! ಕೀನ್ಯಾದಲ್ಲಿ ಕೊನೆಯ ದಿನ ಯುವಕರನ್ನು ಗುರಿಯಾಗಿಟ್ಟುಕೊಂಡು ಮಾತನಾಡಿದ ಅವರು, ದೇಶವು ಪ್ರಗತಿಯ ಪಥದಲ್ಲಿ ಸಾಗಬೇಕಿದ್ದರೆ ಭ್ರಷ್ಟಾಚಾರ, ಜನಾಂಗೀಯ ವಾದದಿಂದ ಹೊರಬರಬೇಕಿದೆ ಎಂದು ಹೇಳಿದ್ದಾರೆ.  ಕೀನ್ಯಾ ಈಗ ಸಂದಿಗ್ಧ ಕಾಲಘಟ್ಟದಲ್ಲಿದೆ. ಇಂಥ ಪರಿಸ್ಥಿತಿಯಲ್ಲಿ ಕೀನ್ಯಾ ಕೆಟ್ಟ ಸಂಪ್ರದಾಯಗಳಿಗೆ ಕೊನೆ ಹಾಡಬೇಕಿದೆ. ಭ್ರಷ್ಟಾಚಾರ, ಕೌಟುಂಬಿಕ ದೌರ್ಜನ್ಯ ಮತ್ತು ಲಿಂಗ ಪತ್ತೆಯಂಥ  ಅನಿಷ್ಟಗಳಿಗೆ ತಿಲಾಂಜಲಿ ಇಡಬೇಕಿದೆ ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ, ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನೋಡುವುದು ಒಳ್ಳೆಯ ಸಂಪ್ರದಾಯವಲ್ಲ. ಈ ರೀತಿಯ ಮನಸ್ಥಿತಿ ಬದಲಾಗಬೇಕಿದೆ. ಇಂಥ ಮನೋಭಾವದಿಂದ ದೇಶದ ಪ್ರಗತಿ ಅಸಾಧ್ಯ ಎಂದ ಅವರು, ಅವರನ್ನೂ ಸಮಾನರಂತೆ ಕಾಣುವಂತ ಬದಲಾವಣೆಗಾಗಿ ಮನವಿ ಮಾಡಿದ್ದಾರೆ. ಒಬಾಮ ಅವರು ಈ ಹಿಂದೆಯೇ ಕೀನ್ಯಾಗೆ ಭೇಟಿ ನೀಡಬೇಕಿತ್ತು.  ಆದರೆ, ದೇಶದ ಅಧ್ಯಕ್ಷ ಉಹುರು ಕೀನ್ಯತ್ತಾ ಅವರು ಮಾನವ ಕಗ್ಗೊಲೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಭೇಟಿ ಸಾಧ್ಯವಾಗಿರಲಿಲ್ಲ. ಆದರೆ, ಅಂತಾರಾಷ್ಟ್ರೀಯ ಅಪರಾಧ  ನ್ಯಾಯಾಲಯವು ನಂತರ ಸಾಕ್ಷ್ಯಗಳ ಕೊರತೆ ಹಿನ್ನೆಲೆಯಲ್ಲಿ ಕೀನ್ಯತ್ತಾ ಮೇಲಿನ ವಿಚಾರಣೆ ಕೈಬಿಟ್ಟಿತ್ತು.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement