ಶ್ರೀನಗರ: ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಕಾಶ್ಮೀರ ವಿವಾದದ ಬಗ್ಗೆ ಪಾಕಿಸ್ತಾನದ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ಕಾಶ್ಮೀರಿ ಪ್ರತ್ಯೇಕತಾವಾದಿಗಳು ನಡೆಸುತ್ತಿರುವ ಚಳುವಳಿಗೆ ಬೆಂಬಲ ಘೋಷಿಸಿದ್ದಾರೆ.
ಕಾಶ್ಮೀರಿ ಮಹಿಳಾ ಪ್ರತ್ಯೇಕತಾವಾದಿ ಸಂಘಟನೆಗೆ ಬರೆದಿರುವ ಪತ್ರದಲ್ಲಿ ನವಾಜ್ ಶರೀಫ್ ಚಳುವಳಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಕಾಶ್ಮೀರ ಪ್ರತ್ಯೇಕತಾವಾದಿಗಳ ಚಳುವಳಿಗೆ ಪಾಕಿಸ್ತಾನ ಹಿಂದಿನಿಂದಲೂ ಮಾನವೀಯ ನೈತಿಕ ಮತ್ತು ರಾಜತಾಂತ್ರಿಕ ಬೆಂಬಲ ನೀಡುತ್ತಿದೆ. ಇನ್ನು ಮುಂದೆಯೂ ಪಾಕಿಸ್ತಾನ ಪ್ರತ್ಯೇಕತಾವಾದಿಗಳಿಗೆ ಸಹಕಾರ ನೀಡುವುದನ್ನು ಮುಂದುವರೆಸುತ್ತದೆ ಎಂದು ಮೂಲಭೂತವಾದಿ ಮಹಿಳಾ ತಂಡದ ನಾಯಕಿ ಆಶಿಯಾ ಅಂದ್ರಾಬಿಗೆ ನವಾಜ್ ಷರೀಫ್ ಹೇಳಿದ್ದಾರೆ.
ಸ್ವಯಮಾಧಿಕಾರಕ್ಕಾಗಿ ನಡೆಯುತ್ತಿರುವ ನಿಮ್ಮ ದೃಢ ಸಂಕಲ್ಪದ ಹೋರಾಟ ಚಳುವಳಿಗೆ ಹುರುಪು ನೀಡಿದೆ. ಹೋರಾಟಕ್ಕೆ ಫಲ ಸಿಗುವ ದಿನಗಳು ದೂರ ಇಲ್ಲ ಎಂದು ಪಾಕ್ ಪ್ರಧಾನಿ ಪತ್ರದಲ್ಲಿ ತಿಳಿಸಿದ್ದಾರೆ.