ವಾಷಿಂಗ್ಟನ್: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಮೆರಿಕದಲ್ಲಿ ಓದುವ ಭಾರತೀಯವಿದ್ಯಾರ್ಥಿಗಳಸಂಖ್ಯೆಶೇ.30ರಷ್ಟು ಏರಿಕೆ ಕಂಡಿದ್ದು 1,32,888ಕ್ಕೆ ತಲುಪಿದೆ. ಇದರಿಂದ ಅಮೆರಿಕದ ಆರ್ಥಿಕತೆಗೆ ವಾರ್ಷಿಕ 360 ಕೋಟಿ ಡಾಲರ್ ಸಂದಾಯವಾಗುತ್ತಿದೆ.
ಈ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದು ಶೇ.11ರಷ್ಟು ಏರಿಕೆ ಕಂಡಿದೆ. ಈ ವರ್ಷ ಭಾರತದ ವಿದ್ಯಾರ್ಥಿಗಳ ಸಂಖ್ಯೆ ಚೀನಾ ಸಂಖ್ಯೆಯನ್ನು ಹಿಂದಿಕ್ಕಿದೆ. 1954-55ರಿಂದ ಇದು ಭಾರತದ ಅತ್ಯಧಿಕ ವಿದ್ಯಾರ್ಥಿಗಳ ಸಂಖ್ಯೆಯಾಗಿದೆ ಎಂದು ಅಂತಾರಾಷ್ಟ್ರೀಯ ಶಿಕ್ಷಣ ಕುರಿತ ವಿಶ್ಲೇಷಣಾ ಸಂಸ್ಥೆ ಓಪನ್ ಡೋರ್ಸ್ ಹೇಳಿದೆ.