ಪ್ಯಾರಿಸ್ ಪೊಲೀಸರು ಮತ್ತು ಸೇನಾಪಡೆ 
ವಿದೇಶ

ಪ್ಯಾರಿಸ್‍ನಲ್ಲಿ ನಡೆದ 7 ಗಂಟೆಗಳ ಸತತ ಕಾರ್ಯಾಚರಣೆ ಯಶಸ್ವಿ

ನಾಲ್ಕು ದಿನಗಳ ಹಿಂದೆ ಐಎಸ್ ಉಗ್ರರು ಪ್ಯಾರಿಸ್‍ನಲ್ಲಿ ಸರಣಿ ದಾಳಿ ನಡೆಸುವ ಮೂಲಕ ಇಡೀ ಜಗತ್ತನ್ನೇ ನಡುಗಿಸಿದ್ದರು...

ನಾಲ್ಕು ದಿನಗಳ ಹಿಂದೆ ಐಎಸ್ ಉಗ್ರರು ಪ್ಯಾರಿಸ್‍ನಲ್ಲಿ ಸರಣಿ ದಾಳಿ ನಡೆಸುವ ಮೂಲಕ ಇಡೀ ಜಗತ್ತನ್ನೇ ನಡುಗಿಸಿದ್ದರು. ಈ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ ಪ್ಯಾರಿಸ್ ಪೊಲೀಸರು ಮತ್ತು ಸೇನಾಪಡೆ ಬುಧವಾರ 7 ಗಂಟೆ ಕಾರ್ಯಾಚರಣೆ ನಡೆಸಿ ಉಗ್ರರನ್ನು ಸದೆಬಡಿಯಿತು.
ಉಗ್ರರಿಗೆ ಬಲಿಯಾದ ಶ್ವಾನ ಡೀಸೆಲ್!
ಪ್ಯಾರಿಸ್ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಉಗ್ರ ನಿಗ್ರಹ ಪಡೆ(ರೈಡ್)ಯ ಶ್ವಾನ ಮೃತಪಟ್ಟಿದೆ. ಮಹಿಳಾ ಉಗ್ರಗಾಮಿಯು ಆತ್ಮಾಹುತಿ ಬೆಲ್ಟ್ ಧರಿಸಿ ಸ್ಫೋಟಿಸಿಕೊಂಡಾಗ ಈ ಶ್ವಾನದ ದೇಹವು ಛಿದ್ರವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಡೀಸೆಲ್ ಎಂಬ ಹೆಸರಿನ 7 ವರ್ಷದ ಬೆಲ್ಜಿಯನ್ ಶೆಫರ್ಡ್ ಶ್ವಾನವನ್ನು ಉಗ್ರ ನಿಗ್ರಹ ಕಾರ್ಯಾಚರಣೆಗೆಂದು ಬಳಸಲಾಗುತ್ತಿತ್ತು. ಇದರ ಸಾವಿನ ಬಗ್ಗೆ ಟ್ವೀಟ್ ಮಾಡಿರುವ ಅಧಿಕಾರಿಯೊಬ್ಬರು, ``ನಮ್ಮ ಸಹೋದ್ಯೋಗಿಯೊಬ್ಬನನ್ನು ಕಳೆದುಕೊಂಡಷ್ಟೇ ನೋವಾಗುತ್ತಿದೆ'' ಎಂದಿದ್ದಾರೆ.
ಗೆಳೆಯ ಹೇಳಿದ್ದಕ್ಕೆ ಬಾಡಿಗೆ ನೀಡಿದ್ದೆ
``ಗೆಳೆಯನೊಬ್ಬ ಕೇಳಿಕೊಂಡಿದ್ದಕ್ಕಾಗಿ ಬೆಲ್ಜಿಯಂನ ಇಬ್ಬರಿಗೆ ನನ್ನ ಅಪಾಟ್ರ್ ಮೆಂಟ್ ಅನ್ನು ಬಾಡಿಗೆಗೆ ನೀಡಿದ್ದೆ. ಅವರು ಭಯೋತ್ಪಾದಕರು ಎಂದು ನನಗೆ ಗೊತ್ತಿರಲಿಲ್ಲ.'' ಹೀಗೆಂದು ಹೇಳಿದ್ದು ಸೈಂಟ್ ಡೆನಿಸ್‍ನಲ್ಲಿ ಬಂಧಿತನಾದ ವ್ಯಕ್ತಿ. ಪ್ಯಾರಿಸ್ ಪೊಲೀಸರು ಕಾರ್ಯಾಚರಣೆ ನಡೆಸಿದ ಅಪಾರ್ಟ್‍ಮೆಂಟ್ ಈತನದ್ದು. ಉಗ್ರರ ಜೊತೆಗೆ ಈತನನ್ನೂ ಪೊಲೀಸರು ಬಂಧಿಸಿದ್ದಾರೆ. ``ನನ್ನ ಅಪಾರ್ಟ್‍ಮೆಂಟಲ್ಲಿ ಹಾಸಿಗೆಯಿಲ್ಲ ಎಂದು ನಾನು ಅವರಿಗೆ ಹೇಳಿದೆ. ಅದಕ್ಕವರು, ಪರ್ವಾಗಿಲ್ಲ, ಕುಡಿಯಲು ನೀರು ಮತ್ತು ಪ್ರಾರ್ಥನೆ ಮಾಡಲು ಜಾಗ ಇದ್ದರೆ ಅಷ್ಟೇ ಸಾಕು ಎಂದಿದ್ದರು'' ಎಂದೂ ಆತ ಹೇಳಿದ್ದಾನೆ. 
ಬಾಂಬ್ ಬೆದರಿಕೆ
ಫುಟ್ಬಾಲ್ ಪಂದ್ಯ ರದ್ದು ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಮಂಗಳ ವಾರ ನಡೆಯಬೇಕಿದ್ದ ಜರ್ಮನಿ ನೆದರ್ಲೆಂಡ್ ಫುಟ್ಬಾಲ್ ಪಂದ್ಯ ರದ್ದು ಮಾಡಲಾಯಿತು. ಮಂಗಳವಾರ ರಾತ್ರಿ ಬರ್ಲಿನ್‍ನ ಹ್ಯಾನೋವರ್‍ನ ಸ್ಟೇಡಿಯಂಗೆ ಪಂದ್ಯ ವೀಕ್ಷಿಸಲೆಂದು ಜನ ಮುಗಿಬಿದ್ದಿದ್ದರು. ಆದರೆ, ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ, 20 ನಿಮಿಷಗಳಲ್ಲೇ ಅವರೆಲ್ಲರನ್ನೂ ಹೊರಗೆ ಕಳುಹಿಸಲಾಯಿತು. ಪಂದ್ಯ ವೀಕ್ಷಿಸಲೆಂದು ಹ್ಯಾನೋವರ್ ಏರ್ ಪೋರ್ಟ್ ಬಂದಿಳಿದಿದ್ದ ಜರ್ಮನಿ ಪ್ರಧಾನಿ ಮರ್ಕೆಲ್ ಅವರೂ ಅಲ್ಲಿಂದಲೇ ವಾಪಸಾದರು. ಆದರೆ, ಸತತ ಶೋಧ ಕಾರ್ಯ ನಡೆಸಿದರೂ ಯಾವುದೇ ಸ್ಫೋಟಕಗಳು ಪತ್ತೆಯಾಗಲಿಲ್ಲ.
ಎರಡು ವಿಮಾನಗಳ ಸಂಚಾರ ಬದಲು
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಬುಧವಾರ ಅಮೆರಿಕದಿಂದ ಪ್ಯಾರಿಸ್‍ಗೆ ತೆರಳಬೇಕಿದ್ದ ಎರಡು ಏರ್ ಫ್ರಾನ್ಸ್ ವಿಮಾನಗಳ ಸಂಚಾರ ಬದಲು ಮಾಡಲಾಯಿತು. ಒಂದು ವಿಮಾನವನ್ನು ಉಟಾಹ್‍ನ ಸಾಲ್ಟ್ ಲೇಕ್ ಸಿಟಿಯತ್ತ, ಇನ್ನೊಂದನ್ನು ಕೆನಡಾದ ಹಾಲಿ ಫ್ಯಾಕ್ಸ್ ನತ್ತ ತಿರುಗಿಸಲಾಯಿತು. ಎರಡೂ ವಿಮಾನಗಳು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ಅನುಮಾನಾಸ್ಪದ ಚೀಲ ಕಂಡುಬಂದ ಹಿನ್ನೆಲೆಯಲ್ಲಿ ಬುಧವಾರ ಡೆನ್ಮಾರ್ಕ್ ಪೊಲೀಸರು ಕೋಪನ್ ಹ್ಯಾಗನ್ ಕ್ಯಾಸ್ಟ್ರಪ್ ಏರ್ ಪೋರ್ಟ್ನ 2 ಟರ್ಮಿನಲ್‍ಗಳ ಪೈಕಿ ಒಂದನ್ನು ಸಂಪೂರ್ಣ ಖಾಲಿ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್