ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (ಸಂಗ್ರಹ ಚಿತ್ರ) 
ವಿದೇಶ

ಬೆನ್ನಿಗೆ ಚೂರಿ ಹಾಕಿದ ಟರ್ಕಿ: ವ್ಲಾದಿಮಿರ್‌ ಪುಟಿನ್‌

ಟರ್ಕಿ ದೇಶವು ರಷ್ಯಾಗೆ ಬೆನ್ನಗೆ ಚೂರಿ ಹಾಕಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಮಂಗಳವಾರ ಹೇಳಿದ್ದಾರೆ...

ಮಾಸ್ಕೋ: ಟರ್ಕಿ ದೇಶವು ರಷ್ಯಾಗೆ ಬೆನ್ನಗೆ ಚೂರಿ ಹಾಕಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಮಂಗಳವಾರ ಹೇಳಿದ್ದಾರೆ.

ರಷ್ಯಾ ಯುದ್ಧ ವಿಮಾನವು ಅಂತಾರಾಷ್ಟ್ರೀಯ ವಾಯುಗಡಿಯನ್ನು ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದ ಟರ್ಕಿ ಸೇನೆಯು ಇಂದು ರಷ್ಯಾ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ರಷ್ಯಾ ಯುದ್ಧ ವಿಮಾನದಲ್ಲಿದ್ದ ಓರ್ವ ಪೈಲಟ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ‘ರಷ್ಯಾದ ಭದ್ರತಾ ಪಡೆಗೆ ಸೇರಿದ ಸುಖೊಯ್ ಎಸ್‌ಯು–24 ಜೆಟ್‌ ವಿಮಾನವನ್ನು ಸಿರಿಯಾದಲ್ಲಿ ಹೊಡೆದು ಉರುಳಿಸಲಾಗಿದೆ. ಟರ್ಕಿಯ ಇಂತಹ ನಿರ್ಧಾರಗಳು ರಷ್ಯಾ ಹಾಗೂ ಟರ್ಕಿಯ ಸಂಬಂಧದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ ಎಂದು ಟರ್ಕಿಗೆ ಎಚ್ಚರಿಸಿದ್ದಾರೆ.

ಯುದ್ಧ ವಿಮಾನದ ಮೇಲಿನ ದಾಳಿಯೊಂದು ಇಂದು ದುರಂತ ಘಟನೆಯಾಗಿದೆ. ವಿಮಾನವು ಟರ್ಕಿಯ ವೈಮಾನಿಕ ಗಡಿ ಪ್ರವೇಶಿಸಿರಲಿಲ್ಲ’ವಿಮಾನ ಪತನದ ಸನ್ನಿವೇಶವನ್ನು ಅವಲೋಕಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇದರಂತೆಯೇ ಟರ್ಕಿಶ್ ದೇಶದ ಪ್ರಧಾನಮಂತ್ರಿ ಅಹ್ಮೆತ್ ದವುಟೊಗ್ಲು ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಗಡಿಯಲ್ಲಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಸೇನೆ ಕ್ರಮ ಕೈಗೊಳ್ಳಬೇಕಾದದ್ದು ಅವರ ಕರ್ತವ್ಯವಾಗಿದೆ. ಆ ಕರ್ತವ್ಯವನ್ನು ಅವರು ಪಾಲಿಸಿದ್ದಾರೆ. ರಷ್ಯಾದ ಸೇನೆ ಗಡಿಯಲ್ಲಿ ನಿಯಮ ಉಲ್ಲಂಘಿಸಿದ್ದರಿಂದ ವಿಮಾನವನ್ನು ಹೊಡೆದುರುಳಿಸಲಾಗಿದೆ. ಅಂತರಾಷ್ಟ್ರೀಯ, ರಾಷ್ಟ್ರೀಯ ಭೂ ಗಡಿ ಹಾಗೂ ವಾಯು ಗಡಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ನಮ್ಮ ರಾಷ್ಟ್ರೀಯ ಕರ್ತವವಾಗಿದೆ. ಇದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel