ನ್ಯೂಯಾರ್ಕ್: ಪಾಕಿಸ್ತಾನ ಪ್ರಧಾನಿ ಸಂಬಂಧ ಸುಧಾರಣೆಗೆ ನಾಲ್ಕು ಅಂಶಗಳ ಸೂತ್ರ ನೀಡಿದ್ದಾರೆ. ಅದೇನೂ ಬೇಕಾಗಿಲ್ಲ, ಭಯೋತ್ಪಾದನೆ ಬಿಡಿ. ಮಾತುಕತೆಗೆ ಬನ್ನಿ ಇದು ಪಾಕ್ ಪ್ರಧಾನಿ ನವಾಜ್ ಷರೀಫ್ ಬುಧವಾರ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೀಡಿದ ಖಡಕ್ ಪ್ರತ್ಯುತ್ತರ.
ಪಾಕಿಸ್ತಾನ ಸರ್ಕಾರ ಉಗ್ರ ಕೃತ್ಯಗಳನ್ನು ಸ್ಥಗಿತಗೊಳಿಸಿ ಮಾತುಕತೆಗೆ ಬರುವ ಮಾತನ್ನಾಡಲಿ. ಕೇಂದ್ರ ಸರ್ಕಾರ ಕೂಡಲೇ ದ್ವಿಪಕ್ಷೀಯ ಮಾತುಕತೆಗಳಿಗೆ ಸಿದ್ಧತೆ ಮಾಡುತ್ತದೆ ಎಂದು ಸುಷ್ಮಾ ತಿಳಿಸಿದ್ದಾರೆ. ಇಷ್ಟು ಮಾತ್ರವಲ್ಲದೆ, ದ್ವಿಪಕ್ಷೀಯವಾಗಿ ಇರುವಂಥ ಎಲ್ಲ ಬಿಕ್ಕಟ್ಟಿನ ಅಂಶಗಳ ಬಗ್ಗೆ ಭಾರತ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದಾರೆ. ಪಾಕ್ ಜತೆಗೆ ಹೊಂದಿರುವ ಉಗ್ರ ಸಂಬಂಧ ಮತ್ತು ಗಡಿ ತಂಟೆ ವಿಚಾರ ಚರ್ಚಿಸಲು ಡಿಜಿಎಂಒ ಮತ್ತು ಎನ್‍ಎಸ್‍ಎ ನಡುವೆ ಚರ್ಚೆಗೆ ಭಾರತ ಸಿದ್ಧವಿದೆ ಎಂದಿದ್ದಾರೆ. ಆದರೆ ಹಿಂದಿನ ಸಂದರ್ಭಗಳಲ್ಲಿ ಪಾಕ್ ಭಾರತಕ್ಕೆ ನೀಡಿದ ವಾಗ್ದಾನ ಮರೆತಿದೆ. 26/11 ದಾಳಿಯ ರೂವಾರಿ ಹಫೀಜ್ ಸಯೀದ್‍ನನ್ನು ಮುಕ್ತವಾಗಿರುವಂತೆ ಮಾಡಿದೆ. ಇದು ಎಷ್ಟು ಸರಿ ಎಂದು ಸ್ವರಾಜ್ ಪ್ರಶ್ನಿಸಿದ್ದಾರೆ.