ಐಎನ್ ಎಸ್ ಸಹ್ಯಾದ್ರಿ (ಸಂಗ್ರಹ ಚಿತ್ರ) 
ವಿದೇಶ

ವಿಯೆಟ್ನಾಂ ನಲ್ಲಿ ಐಎನ್ ಎಸ್ ಸಹ್ಯಾದ್ರಿ; ಚೀನಾಕ್ಕೆ ಭಾರಿ ಹಿಂದೇಟು

ದಕ್ಷಿಣ ಚೀನಾ ಸಮುದ್ರ ಮತ್ತು ಹಿಂದೂ ಮಹಾಸಾಗರದ ಮೇಲೆ ಹಿಡಿತ ಸಾಧಿಸಬೇಕು ಎನ್ನುವ ಚೀನಾದ ಕನಸಿಗೆ ಭಾರತ ದೊಡ್ಡ ಆಘಾತವನ್ನೇ ನೀಡಿದೆ...

ನವದೆಹಲಿ: ದಕ್ಷಿಣ ಚೀನಾ ಸಮುದ್ರ ಮತ್ತು ಹಿಂದೂ ಮಹಾಸಾಗರದ ಮೇಲೆ ಹಿಡಿತ ಸಾಧಿಸಬೇಕು ಎನ್ನುವ ಚೀನಾದ ಕನಸಿಗೆ ಭಾರತ ದೊಡ್ಡ ಆಘಾತವನ್ನೇ ನೀಡಿದೆ.

ಭಾರತೀಯ ಯುದ್ಧನೌಕೆ ಐಎನ್​ಎಸ್ ಸಹ್ಯಾದ್ರಿ, ದಕ್ಷಿಣ ಚೀನಾ ಸಮುದ್ರದ ವ್ಯಾಪ್ತಿಗೆ ಬರುವ ವಿಯೆಟ್ನಾಂನ ದ ನಾಂಗ್ ಬಂದರು ತಲುಪಿದ್ದು, ವಿಯೆಟ್ನಾಂ ಜತೆ ಮಾಡಿಕೊಂಡಿದ್ದ ಒಪ್ಪಂದದ ಭಾಗವಾಗಿ ಭಾರತ ಈ ಯುದ್ಧನೌಕೆಯನ್ನು ಕಳಿಸಿಕೊಟ್ಟಿದೆ. ನಾಲ್ಕು ದಿನ ದ ನಾಂಗ್​ ಬಂದರಿನಲ್ಲಿ ಲಂಗರು ಹಾಕುವ ಸಹ್ಯಾದ್ರಿ, ಉಭಯ ದೇಶಗಳ ನಡುವೆ ಅಧಿಕಾರಿಗಳ ಹಂತದ ಮಾತುಕತೆಗೂ ಸಾಕ್ಷಿಯಾಗಲಿದೆ. ಇದು ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತಕ್ಕೆ ಪ್ರಾಮುಖ್ಯತೆ ತಂದುಕೊಟ್ಟಿದೆ.

ದಕ್ಷಿಣ ಚೀನಾ ಸಮುದ್ರ ಹಾಗೂ ಹಿಂದು ಮಹಾಸಾಗರದ ಮೇಲೆ ಹಿಡಿತ ಸಾಧಿಸಲು ದಶಕಗಳಿಂದಲೂ ಪ್ರಯತ್ನಿಸುತ್ತಿರುವ ಚೀನಾಕ್ಕೆ ಭಾರತೀಯ ಸೇನೆ ಮತ್ತೊಂದು ಪ್ರಬಲವಾದ ತಿರುಗೇಟು ನೀಡಿದ್ದು, ಜಪಾನ್, ವಿಯೆಟ್ನಾಂ ಬಳಿಕ ಈಗ ಆಸ್ಟ್ರೇಲಿಯಾದ ನೌಕಾಪಡೆಯೂ ಭಾರತದೊಂದಿಗೆ ಕೈ ಜೋಡಿಸಿದೆ. ಇದು ಚೀನಾಗೆ ಮಹತ್ವದ ಹಿನ್ನಡೆಯಾಗಿದ್ದು. ಕೆಲ ತಿಂಗಳ ಹಿಂದೆ ಶ್ರೀಲಂಕಾದಲ್ಲಿ ತನ್ನ ಪರಮಾಣು ಚಾಲಿತ ಜಲಾಂತರ್ಗಾಮಿಯನ್ನು ನಿಲ್ಲಿಸಿ ಭದ್ರತಾ ಆತಂಕ ಒಡ್ಡಿದ್ದ ಚೀನಾ ಈಗ ಜಾಗತಿಕ ಮಟ್ಟದಲ್ಲಿ ಒಬ್ಬಂಟಿಯಾಗಿದೆ. ಭಾರತೀಯ ನೌಕಾಪಡೆಯ ಮುಖ್ಯಸ್ಥ ಆರ್.ಕೆ. ಧೋವನ್ ಅವರ 6 ದಿನಗಳ ಆಸ್ಟ್ರೇಲಿಯಾ ಪ್ರವಾಸ ಆರಂಭಿಸಿದ್ದು, ಆಸ್ಟ್ರೇಲಿಯನ್ ರಾಯಲ್ ನೇವಿ ಅಧಿಕಾರಿಯೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.  ಇದೇ ಸಂದರ್ಭದಲ್ಲಿ ಭಾರತದ ಯುದ್ಧನೌಕೆ ಐನ್​ಎನ್​ಎಸ್ ಸಹ್ಯಾದ್ರಿ ದಕ್ಷಿಣ ಚೀನಾ ಸಮುದ್ರದ ವ್ಯಾಪ್ತಿಗೆ ಬರುವ ವಿಯೆಟ್ನಾಂ ಬಂದರು ತಲುಪಿದ್ದು, ಇದು ಚೀನಾಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ವಿವಾದ ಏನು?
ಅಪಾರ ಪ್ರಮಾಣದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ನಿಕ್ಷೇಪ ಇದೆ ಎನ್ನಲಾದ ದಕ್ಷಿಣ ಚೀನಾ ಸಮುದ್ರ ತನಗೇ ಸೇರಿದ್ದು ಎಂದು ಚೀನಾ ಹೇಳಿಕೊಳ್ಳುತ್ತಿದೆ. ಈ ವ್ಯಾಪ್ತಿಯಲ್ಲಿ ಕೃತಕ ದ್ವೀಪವನ್ನೂ ಅದು ನಿರ್ವಿುಸುತ್ತಿದೆ. ಜಾಗತಿಕ ಸರಕು ಸಾಗಾಣಿಕಾ ಮಾರ್ಗವಾಗಿರುವ ಈ ಸಮುದ್ರದಲ್ಲಿ ಹಿಡಿತ ಸಾಧಿಸಿದರೆ ಅಪಾರ ಆದಾಯಗಳಿಸಬಹುದು ಎಂಬುದು ಚೀನಾ ಯೋಜನೆ. ಆದರೆ ಇದಕ್ಕೆ ಭಾರತ ಸೇರಿದಂತೆ ಮಲೇಷ್ಯಾ, ಫಿಲಿಪ್ಪೀನ್ಸ್, ವಿಯೆಟ್ನಾಂ ಮತ್ತಿತರ ದೇಶಗಳು ವಿರೋಧ ವ್ಯಕ್ತಪಡಿಸುತ್ತಿವೆ.

ಜಪಾನ್, ಅಮೆರಿಕ ಸಾಥ್
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಅಮೆರಿಕಕ್ಕೆ ತೆರಳಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಅಮೆರಿಕ ಹಾಗೂ ಜಪಾನ್ ವಿದೇಶಾಂಗ ಸಚಿವರ ಜತೆ ತ್ರಿಪಕ್ಷೀಯ ಮಾತುಕತೆ ನಡೆಸಿದ್ದು, ದಕ್ಷಿಣ ಚೀನಾ ಸಮುದ್ರದಲ್ಲಿ ಸುರಕ್ಷಿತ ಸರಕು ಸಾಗಾಣೆ, ಭದ್ರತೆ, ಸ್ವತಂತ್ರ ದಿಕ್ಸೂಚಿ ವ್ಯವಸ್ಥೆ ಮತ್ತಿತರ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ. ಜಪಾನ್ ಈ ಹಿಂದಿನಿಂದಲೂ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಚೀನಾದ ಆಕ್ರಮಣಕಾರಿ ನೀತಿಯನ್ನು ಮೊದಲಿನಿಂದಲೂ ಖಂಡಿಸುತ್ತಲೇ ಬಂದಿದೆ. ಇದಲ್ಲದೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡಲು ಅಮೆರಿಕ ಬೆಂಬಲ ನೀಡಿದೆ. ಇದು ಸಾಕಾರವಾದರೆ ಜಾಗತಿಕ ಮಟ್ಟದಲ್ಲೂ ಚೀನಾಕ್ಕೆ ಸಮನಾಗಿ ಭಾರತ ಹೊರಹೊಮ್ಮಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

ವೃತ್ತಿ ಜೀವನದ ಬಹು ದೊಡ್ಡ ಕನಸನ್ನು ರಿವೀಲ್ ಮಾಡಿದ ವೈಭವ್ ಸೂರ್ಯವಂಶಿ! Video

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!