ಬಡತನ(ಸಾಂದರ್ಭಿಕ ಚಿತ್ರ) 
ವಿದೇಶ

ವಿಶ್ವ ಬಡತನ ಶೇ. 9.6 ಇಳಿಕೆಯ ನಿರೀಕ್ಷೆಯಲ್ಲಿ ವಿಶ್ವಬ್ಯಾಂಕ್

ಅತಿ ಬಡತನ ರೇಖೆಯಲ್ಲಿ ಬದುಕುತ್ತಿರುವವರ ಜನರ ಸಂಖ್ಯೆ 2015 ನೇ ಸಾಲಿನಲ್ಲಿ ಶೇ.9.6 ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.

ವಾಷಿಂಗ್ಟನ್: ಅತಿ ಬಡತನ ರೇಖೆಯಲ್ಲಿ ಬದುಕುತ್ತಿರುವವರ ಜನರ ಸಂಖ್ಯೆ 2015 ನೇ ಸಾಲಿನಲ್ಲಿ ಶೇ.9.6 ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.
ವಿಶ್ವ ಬ್ಯಾಂಕ್ ನಿಂದ ಮುನ್ನೋಟ ಬಿಡುಗಡೆಯಾಗಿದ್ದು, ಹೊಸ ಬಡತನ ರೇಖೆಯನ್ನು ನಿಗದಿಪಡಿಸಿದೆ. ಪ್ರತಿದಿನ 1 .9 ಡಾಲರ್ ಸಂಪಾದನೆ ಇರುವವರು ಬಡತನ ರೇಖೆಗಿಂತ ಹೊರಗುಳಿಯಲಿದ್ದಾರೆ. 2005 ರಲ್ಲಿ ಈ ಮಾನದಂಡವನ್ನು  1 .25 ಡಾಲರ್ ಗೆ ನಿಗದಿಪಡಿಸಲಾಗಿತ್ತು.
ಬೇರೆ ಬೇರೆ ದೇಶಗಳಲ್ಲಿರುವ ಜೀವನ ನಿರ್ವಹಣೆಯ ವೆಚ್ಚದ ವ್ಯತ್ಯಾಸಗಳಿಗೆ ಸಂಬಂಧಿಸಿದ ಹೊಸ ಮಾಹಿತಿಯನ್ನು ವಿಶ್ವ ಬ್ಯಾಂಕ್ ಅಳವಡಿಸಿಕೊಂಡಿದೆ. ಬಡತನ ರೇಖೆಗೆ ಹೊಸ ಮಾನದಂಡವನ್ನು ಅಳವಡಿಸಿರುವುದನ್ನು ಸಮರ್ಥಿಸಿಕೊಂಡಿರುವ ವಿಶ್ವ ಬ್ಯಾಂಕ್ ನ ಮುಖ್ಯ ಆರ್ಥಿಕ ತಜ್ಞ ಕೌಶಿಕ್ ಬಸು, 2005 ರಿಂದ ಈ ವರೆಗೂ ಬೆಲೆ ಏರಿಕೆಯಾಗಿದೆ. 2005 ರಲ್ಲಿ 1 .25 ಡಾಲರ್ ನೀಡಿ ಕೊಳ್ಳಬಹುದಾಗಿದ್ದ ವಸ್ತುವನ್ನು ಈಗ ಅದೇ ಬೆಲೆಗೆ ಖರೀದಿಸಲು ಸಾಧ್ಯವಿಲ್ಲ. ಆದ್ದರಿಂದ ಹೊಸ ಮಾನದಂಡ ನಿಗದಿಪಡಿಸಿರುವುದು ಸರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 
ಬಡತನ ರೇಖೆಗೆ ಪರಿಷ್ಕೃತ ಮಾನದಂಡ ರೂಪಿಸುವಾಗ ಅತಿ ಬಡರಾಷ್ಟ್ರಗಳಲ್ಲಿರುವ ಹಣದುಬ್ಬರ ದರವನ್ನು ಪರಿಗಣಿಸಲಾಗಿದೆ ಎಂದು ಬಸು ತಿಳಿಸಿದ್ದಾರೆ. ಹೊಸ ಮಾನದಂಡದ ಪ್ರಕಾರ ಜಾಗತಿಕ ಬಡವರ ಸಂಖ್ಯೆ 902 ಮಿಲಿಯನ್ ನಿಂದ 702 ಮಿಲಿಯನ್(ಶೇ.12 .8 ರಿಂದ ಶೇ.9 .6 ಕ್ಕೆ) ಇಳಿಕೆಯಾಗುವ ನಿರೀಕ್ಷೆ ಇದೆ.
ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೆಳವಣಿಗೆ ದರ ಏರಿಕೆಯಾಗಿರುವುದು ಸಹ ಬಡತನ ಇಳಿಕೆಯಾಗಲು ಕಾರಣವಾಗಿರುವ ಅಂಶವಾಗಿದೆ ಎಂದು ವಿಶ್ವ ಬ್ಯಾಂಕ್ ನ ಮುನ್ನೋಟ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್