ವಿದೇಶ

ಪಾಕ್ ಗೆ ಭೇಟಿ ನೀಡುವ ಭಾರತೀಯರಿಗೆ ಉಚಿತ ಮೀಲ್ಸ್!

Srinivas Rao BV

ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಭೇಟಿ ನಿಡುವ ಯಾವುದೇ ಭಾರತೀಯರಿಗೆ ಉಚಿತವಾಗಿ ಊಟ ನೀಡುವುದಾಗಿ ಪಾಕಿಸ್ತಾನದ ಡಂಕಿನ್ ಡುನಟ್ಸ್ ರೆಸ್ಟೋರೆಂಟ್ ಹೇಳಿದೆ.
ಅಲ್ಪಾವಧಿ ವೀಸಾದ ಮೂಲಕ ಪಾಕಿಸ್ತಾನಕ್ಕೆ ತೆರಳುವ ಯಾವುದೇ ಭಾರತೀಯರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗುವುದು ಇದರಿಂದಾಗಿ ಉಭಯ ದೇಶಗಳ ನಡುವಿನ ಸೌಹಾರ್ದತೆಯೂ ಬಲಗೊಳ್ಳುತ್ತದೆ ಎಂದು ಡಂಕಿನ್ ಡುನಟ್ಸ್ ಕೆಫೆಯ ಮಾಲೀಕ ಇಕ್ಬಾಲ್ ಕುತೀಫ್ ಹೇಳಿದ್ದಾರೆ.
ಲಾಹೋರ್ ಮತ್ತು ಪೇಷಾವರದಲ್ಲಿ ಡಂಕಿನ್ ಡುನಟ್ಸ್ ಕೆಫೆ ಕಾರ್ಯನಿರ್ವಹಿಸುತ್ತಿದೆ. ಮಹಾತ್ಮಾ ಗಾಂಧಿ ಅವರನ್ನು ಆದರ್ಶ ವ್ಯಕ್ತಿಯನ್ನಾಗಿ ಪರಿಗಣಿಸಿರುವ ಇಕ್ಬಾಲ್ ಕುತೀಫ್, ಪ್ರೀತಿ ಮತ್ತು ಸಹಬಾಳ್ವೆಯನ್ನು ಪ್ರತಿಪಾದಿಸಿದ್ದ ಗಾಂಧಿಯ ಬೋಧನೆಗಳನ್ನು ಜಾರಿಗೆ ತರುವ ಪ್ರಯತ್ನ ಇದಾಗಿದೆ ಎಂದಿದ್ದಾರೆ. 
ಭಾರತೀಯರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡುತ್ತಿರುವ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು ಲಾಹೋರ್, ಇಸ್ಲಾಮಾಬಾದ್, ಪೇಶಾವರದಲ್ಲಿ ಈ ವರೆಗೂ 2 ,432 ಜನಕ್ಕೆ ಉಚಿತವಾಗಿ ಊಟದ ವ್ಯವಸ್ಥೆ ಕಲ್ಪಿಸಿರುವುದಾಗಿ ಇಕ್ಬಾಲ್ ತಿಳಿಸಿದ್ದಾರೆ.
ಇತ್ತೀಚೆಗೆ ಭಾರತಕ್ಕೆ ತೆರಳಿದ್ದ ಪಾಕ್ ಕುಟುಂಬವೊಂದಕ್ಕೆ ಮುಂಬೈ ನ ಬೆಂದಿ ಬಜಾರ್ ನಲ್ಲಿರುವ ಯಾವುದೇ ಲಾಡ್ಜ್ ನಲ್ಲಿ ಆಶ್ರಯ ಸಿಗದೇ ಫುಟ್ ಪಾತ್ ನಲ್ಲಿರುವಂತಹ ಪರಿಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಸೌಹಾರ್ದ ವೃದ್ಧಿಸಲು ಈ ವ್ಯವಸ್ಥೆ ಮಾಡಿರುವುದಾಗಿ ಲತೀಫ್ ಹೇಳಿದ್ದಾರೆ.

SCROLL FOR NEXT