ಫ್ರೆಂಚ್: ಬಸ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 42 ಮಂದಿ ವೇತನದಾರರು ಸಾವನ್ನಪ್ಪಿದ್ದಾರೆ.
ಪೂರ್ವ ಬೋರ್ಡೇಕ್ಸ್ ನ ಗಿರೊಂಡ್ ವೈನ್ ನ ಪೈಸೆಗನ್ ಬಳಿ ಬೆಳಗ್ಗೆ 7.30 ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಬಸ್ ನಲ್ಲಿ 41 ಮಂದಿ ಹಾಗೂ ಟ್ರಕ್ ನ ಚಾಲಕ ಸೇರಿ 42 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಫ್ರೆಂಚ್ ಅಧ್ಯಕ್ಷ ಫ್ರಾಕೊಯಿಸ್ ಹೊಲಾಂಡೆ ಅವರು ಟ್ವೀಟ್ ಮಾಡಿದ್ದು, ಇದು ದೇಶದಲ್ಲಿ ಸಂಭವಿಸಿದ ಭಯಾನಕ ದುರ್ಘಟನೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
33 ವರ್ಷಗಳ ಬಳಿಕ ಫ್ರೆಂಚ್ ನಲ್ಲಿ ಸಂಭವಿಸಿದ ಭೀಕರ ಅಪಘಾತ ಇದಾಗಿದೆ. 1982ರಲ್ಲಿ ಸಂಭವಿಸಿದ್ದ ಅಪಘಾತದಲ್ಲಿ 52 ಜನರು ಸಾವನ್ನಪ್ಪಿದ್ದರು.