ಫ್ಲೋರಿಡಾ: ನಿರ್ಗಮನಕ್ಕಾಗಿ ರನ್ ವೇದತ್ತ ಹೋಗುತ್ತಿದ್ದಾಗ ವಿಮಾನವೊಂದಕ್ಕೆ ಬೆಕಿ ಹೊತ್ತಿಕೊಂಡ ಪರಿಣಾಮ 20 ಮಂದಿ ಗಂಭೀರವಾಗಿಗೊಂಡಿರುವ ಘಟನೆ ಫ್ಲೋರಿಡಾ ವಿಮಾನ ನಿಲ್ದಾಣದಲ್ಲಿ ಗುರುವಾರ ನಡೆದಿದೆ.
ಡೈನಾಮಿಕ್ ಇಂಟರ್ ನ್ಯಾಷನಲ್ ಏರ್ ವೇಸ್ ಸಂಸ್ಥೆಯ ಬೋಯಿಂಗ್ 767 ವಿಮಾನದಲ್ಲಿದ್ದ 101 ಪ್ರಯಾಣಿಕರು ಫ್ಲೋರಿಡಾದಿಂದ ವೆನೆಜುವೇಲಾಕ್ಕೆ ತೆರಳುತ್ತಿದ್ದರು. ವಿಮಾನ ರನ್ ವೇ ಅತ್ತ ಸಾಗುತ್ತಿತ್ತು. ಈ ವೇಳೆ ಟೇಕ್ ಆಫ್ ಗೆ ಮುಂದುಗುವಷ್ಟರಲ್ಲಿ ವಿಮಾನದ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ವಿಮಾನ ಅಧಿಕಾರಿಗಳು ಪ್ರಯಾಣಿಕರನ್ನು ಕೆಳಗಿಳಿಸಿದ್ದಾರಾದರೂ ಘಟನೆಯಲ್ಲಿ ಮಗು ಸೇರಿದಂತೆ 20 ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಗಾಯಗೊಂಡವರ ಪೈಕಿ ಇದೀಗ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.