ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮುಸ್ಲಿಮರಂತೆ!

ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಮುಂದುವರಿದಿರುವ ಬರಾಕ್ ಒಬಾಮ ಧರ್ಮದ ಬಗ್ಗೆ ಇವತ್ತಿಗೂ ಅಮೆರಿಕನ್ನರಲ್ಲಿ ಅನುಮಾನಗಳು...

ಬರಾಕ್ ಒಬಾಮಾ
Mainashree
Updated On : 3 Sept 2015, 10:05 am

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಮುಂದುವರಿದಿರುವ ಬರಾಕ್ ಒಬಾಮ ಧರ್ಮದ ಬಗ್ಗೆ ಇವತ್ತಿಗೂ ಅಮೆರಿಕನ್ನರಲ್ಲಿ ಅನುಮಾನಗಳು ಬಗೆಹರಿದಿಲ್ಲ. ಅದರಲ್ಲೂ ಒಬಾಮ ಅವರ ಪ್ರತಿಪಕ್ಷವಾದ ರಿಪಬ್ಲಿಕನ್ ಪಕ್ಷದ ವಲಯದಲ್ಲಂತೂ ಶೇ.50ಕ್ಕಿಂತ ಹೆಚ್ಚು ಮಂದಿ ಒಬಾಮ ಅವರನ್ನು ಮುಸ್ಲಿಂ ಎಂದೇ ಭಾವಿಸಿದ್ದಾರೆ!

ಪಬ್ಲಿಕ್ ಪಾಲಿಸಿ ಪೋಲಿಂಗ್ ಎಂಬ ಸಂಸ್ಥೆ ನಡೆಸಿದ ರಿಪಬ್ಲಿಕನ್ನರ ಸಮೀಕ್ಷೆ ಈ ಮಾಹಿತಿಯನ್ನು ಹೊರಗೆಡವಿದ್ದು, ಶೇ.54ರಷ್ಟು ರಿಪಬ್ಲಿಕನ್ನರು ಒಬಾಮ ಮುಸ್ಲಿಂ ಎಂದೇ ನಂಬುತ್ತಾರೆ. ಶೇ,32 ಮಂದಿಗೆ ತಮ್ಮ ದೇಶದ ಅಧ್ಯಕ್ಷರದ್ದು ಯಾವ ಧರ್ಮ ಎಂಬುದೇ ತಿಳಿದಿಲ್ಲ.

ಇನ್ನೂ ವಿಚಿತ್ರವೆಂದರೆ, ಒಬಾಮ  ಕ್ರೈಸ್ತ ಧರ್ಮದವರು ಎಂದು ನಂಬಿರುವ ರಿಪಬ್ಲಿಕನ್ನರ ಸಂಖ್ಯೆ ಕೇವಲ ಶೇ.14. ಅಮೆರಿಕ ಅಧ್ಯಕ್ಷರ ಪರಂಪರೆಯಲ್ಲೇ ಅತ್ಯಂತ ಜನಪ್ರಿಯ ಅಧ್ಯಕ್ಷರಲ್ಲಿ ಒಬ್ಬರು ಎನ್ನ ಲಾದ ಒಬಾಮ ಅವರ ಜನ್ಮಸ್ಥಳದ ಬಗ್ಗೆ ಕೂಡ ಆ ದೇಶದ ರಿಪಬ್ಲಿಕನ್ನರಲ್ಲಿ ಹಲವು ಗೊಂದಲಗಳು ಮುಂದುವರಿದಿದೆ.

ಶೇ.44 ಮಂದಿ ಅವರು ಅಮೆರಿಕದಲ್ಲಿ ಹುಟ್ಟಿದವರಲ್ಲ ಎಂದು ಕೊಂಡಿದ್ದರೆ, ಶೇ.35ಕ್ಕಿಂತ ಕಡಿಮೆ ಮಂದಿ ಮಾತ್ರ ಒಬಾಮ ಅಮೆರಿಕಜಾತ ಎಂದು ಕೊಂಡಿದ್ದಾರೆ. ಇನ್ನುಳಿದವರಿಗೆ ಹುಟ್ಟಿದ ಸ್ಥಳದ ಮಾಹಿತಿ ಇಲ್ಲ ಎಂದು ಸಮೀಕ್ಷೆ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement