ಕಾಬುಲ್: ಭಾರತ ಅಪ್ಘಾನಿಸ್ತಾನದೊಂದಿಗೆ ಬಲವಾದ ಸಂಬಂಧ ಹೊಂದಲು ಬಯಸುತ್ತಿದೆ ಎಂದು ಹಿರಿಯ ಭಾರತೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತದೊಂದಿಗೆ ಉತ್ತಮ ದ್ವಿಪಕ್ಷೀಯ ಸಂಬಂಧ ಹೊಂದುವುದರಿಂದ ಅಪ್ಘಾನಿಸ್ತಾನದ ಆರ್ಥಿಕತೆ ಹೊಸ ಎತ್ತರಕ್ಕೆ ಬೆಳೆಯಲಿದೆ ಎಂದು ವಿದೇಶಾಂಗ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿರುವ ಸುಜಾತಾ ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ.
ಅಪ್ಘಾನಿಸ್ತಾನದಿಂದ ಮಧ್ಯ ಏಷ್ಯಾಗೆ ಸಂಪರ್ಕ ಕಲ್ಪಿಸುವ ಚಬಹರ್ ಪೋರ್ಟ್ ಯೋಜನೆಯಲ್ಲಿ ಭಾರತ ನಿರತವಾಗಿದೆ. ಇದರಿಂದಾಗಿ ಅಫ್ಘಾನಿಸ್ತಾನಕ್ಕೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಅಫ್ಘಾನಿಸ್ಥಾನ ಆರನೇ ಪ್ರಾದೇಶಿಕ ಆರ್ಥಿಕ ಸಹಕಾರ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ಮೆಹ್ತಾ ತಿಳಿಸಿದ್ದಾರೆ. ಕಾಬುಲ್ ನಲ್ಲಿ ನಡೆಯುತ್ತಿರುವ ಈ ಅಧಿವೇಶನದಲ್ಲಿ ಸುಮಾರು 30 ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.