ಬೀಜಿಂಗ್: ಚೀನಾದ ಪಾದಚಾರಿಗಳಿಗೆ ಉಳಿಗಾಲವಿಲ್ಲ, ಇದಕ್ಕೆ ಕಾರಣ ಅಲ್ಲಿನ ಕಾನೂನು. ಏಕೆಂದರೆ, ಪಾದಚಾರಿ-ಗಳನ್ನು ಅಪಘಾತದಲ್ಲಿ ಗಾಯಗೊಳಿ ಸುವುದಕ್ಕಿಂತ ಕೊಲ್ಲುವುದೇ ಲೇಸು. ಅಪಘಾತಕ್ಕೀಡಾದ ವ್ಯಕ್ತಿ ಸತ್ತರೆ, ಅಪಘಾತ ಮಾಡಿದವರು ನಿರಾಳ, ಒಂದೆರಡು ವರ್ಷ ಜೈಲಲ್ಲಿದ್ದು, ಒಂದಷ್ಟು ದಂಡ ಕೊಟ್ಟು ಬಿಟ್ಟುಬಿಡಬಹುದು. ಅಲ್ಲದೆಅಪಘಾತ ಮಾಡುವುದು ಕೊಲೆಗೆ ಸಂಬಂಧ ಪಟ್ಟ ಕಾನೂನಿನ ವ್ಯಾಪ್ತಿಗೆ ಬರುವುದೇ ಇಲ್ಲ. ಅದೇ ವ್ಯಕ್ತಿ ಗಾಯಗೊಂಡರೆ, ಅಪಘಾತ ಮಾಡಿದ ವ್ಯಕ್ತಿ, ಅಪಘಾತಕ್ಕೀಡಾದ ವ್ಯಕ್ತಿಯನ್ನು ಜೀವ ಮಾನವಿಡೀ ನೋಡಿಕೊಳ್ಳಬೇಕು!
ಹೀಗಾಗಿ ಪಾದಚಾರಿಗಳಿಗೆ ಗುದ್ದಿ ಅಪಘಾತಮಾಡುವ ಯಾವುದೇ ಸವಾರ, ಹಾಗೆ ಮುಂದಕ್ಕೆ ಹೋಗುವುದಿಲ್ಲ. ಬದಲಾಗಿ ಆತ, ಮತ್ತೆ ಹಿಂದಕ್ಕೆ ಬಂದು ಬಿದ್ದಿರುವ ವ್ಯಕ್ತಿ ಮೇಲೆ ವಾಹನ ಹಾಯಿಸಿ ಸಾಯಿಸಿಯೇ ಮುಂದಕ್ಕೆ ಹೋಗುತ್ತಾನೆ. ಇದು ಚೀನಾದ ರಸ್ತೆಗಳಲ್ಲಿ ಹಾಕಲಾಗಿರುವ ಸಿಸಿಟಿವಿ ದೃಶ್ಯಗಳಿಂದಲೇ ದೃಢವಾಗಿದೆ.
ವಾಪಸ್ ಬಂದು ಸಾಯಿಸಿದಳು ಆಕೆ: ಏಪ್ರಿಲ್ ಆರಂಭದಲ್ಲಿ ಒಂದು ಘಟನೆಯಾಗಿದೆ. ``ಗ್ಯಾಂಗ್ಡಾಂಗ್ ಪ್ರದೇಶದ ಹಣ್ಣು ಮಾರುಕಟ್ಟೆಯೊಂದರಲ್ಲಿ ಅಜ್ಜಿ - ಮೊಮ್ಮಗಳು ನಿಂತಿದ್ದಾರೆ. ಅದೇ ರಸ್ತೆಯಲ್ಲಿ ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಮೊಮ್ಮಗಳಿಗೆ ಡಿಕ್ಕಿ ಹೊಡೆದು, ಹತ್ತಿಸಿಕೊಂಡು ಹೋಗಿದೆ. ಕೂಡಲೇ ಅಜ್ಜಿ ಕೂಗಿದ್ದಾಳೆ, ಕೂಡಲೇ ಕಾರು ನಿಲ್ಲಿಸಿದ ಅದರಲ್ಲಿದ್ದ ಚಾಲಕಿ, ರಿವರ್ಸ್ ಬಂದು,ರಸ್ತೆಯಲ್ಲೇ ಬಿದ್ದಿದ್ದ ಬಾಲಕಿ ಮೇಲೆ ಮತ್ತೆ ಹತ್ತಿಸಿದ್ದಾಳೆ. ಮತ್ತೆ ಮುಂದಕ್ಕೆ ತೆಗೆದುಕೊಂಡು ಹೋಗಿ ಒಟ್ಟು ಮೂರು ಬಾರಿ ಆ ಬಾಲಕಿ ಮೇಲೆ ಕಾರು ಹತ್ತಿಸಿದ್ದಾಳೆ. ಬಳಿಕ ಕಾರು ನಿಲ್ಲಿಸಿ ಅಜ್ಜಿ ಬಳಿಗೆ ಬಂದು, ಕಾರು ಓಡಿಸುತ್ತಿದ್ದು ನನ್ನ ಗಂಡ ಎಂದು ಹೇಳು, ನಿಮಗೆ ದುಡ್ಡು ಕೊಡ್ತೇನೆ'' ಎಂದು ಹೇಳಿ ಅಲ್ಲಿಂದ ಹೋಗಿದ್ದಾಳೆ. ಇದೊಂದೇ ಘಟನೆಯಲ್ಲ, ಇಂಥ ಹಲವಾರು ಪ್ರಕರಣಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾ
ಗಿವೆ. ಇತ್ತೀಚಿನ ದಿನಗಳಲ್ಲಿ ಚೀನಾ ಮತ್ತು ಥೈವಾನ್‍ನಲ್ಲಿ ಕೆಲ ಬದಲಾವಣೆಗಳು ಆಗುತ್ತಿವೆ. ನಾಗರಿಕರಲ್ಲಿ ಇಂಥ ಪ್ರಕರಣಗಳ ಬಗ್ಗೆ ಆಕ್ರೋಶ ಹೆಚ್ಚಾದ ಕಾರಣದಿಂದಾಗಿ ಅಲ್ಲಿನ ಸರ್ಕಾರಗಳು ಕೆಲವೊಂದು ಬದಲಾವಣೆ ತರುತ್ತಿವೆ. ಅಂದರೆ,ಒಬ್ಬ ಚಾಲಕ ವ್ಯಕ್ತಿಯೊಬ್ಬನಿಗೆ ಗುದ್ದಿಸಿ ಮುಂದೆ ಹೋಗಿದ್ದಾನೆ, ಆತ ಸತ್ತಿಲ್ಲವೆಂದು ತಿಳಿದುಕಾರಿನಿಂದ ಇಳಿದು ಬಂದು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಈ ಪ್ರಕರಣದಲ್ಲಿ ಆತನಿಗೆಗಲ್ಲು ಶಿಕ್ಷೆಯಾಗಿದೆ. ಅಲ್ಲದೆ ಉದ್ದೇಶಪೂರ್ವಕ ವಾಗಿ ಹತ್ಯೆ ಮಾಡಿರುವುದು ಹಾಗೂ ಇಂಥ ಪ್ರಕರಣಗಳನ್ನು ಮತ್ತೆ ಮತ್ತೆ ಮಾಡುವ ಚಾಲಕರಿಗೆ ಗರಿಷ್ಠ ಶಿಕ್ಷೆ ಕೊಡಲು ಸರ್ಕಾರಗಳು ನಿರ್ಧರಿಸಿವೆ.