ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಸಂಗಾತಿ ಶವದೊಂದಿಗೆ ಸೆಲ್ಫಿ ತೆಗೆದು ಅಪ್ಲೋಡ್ ಮಾಡಿದ ಚೈನಾ ಯುವಕ; ಬಂಧನ

ಚೈನಾದಲ್ಲಿ ನಡೆದಿರುವ ಆಘಾತಕಾರಿ ಘಟನೆಯೊಂದರಲ್ಲಿ ತನ್ನ ವಿವಾಹಪೂರ್ವ ಸಂಗಾತಿಯನ್ನು ಕೊಲೆ ಮಾಡಿ ಶವದೊಂದಿಗೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ

ಚಿತ್ರಕೃಪೆ: ಫೇಸ್ಬುಕ್
Guruprasad Narayana
Updated On : 10 Sept 2015, 5:09 am

ಬೀಜಿಂಗ್: ಚೈನಾದಲ್ಲಿ ನಡೆದಿರುವ ಆಘಾತಕಾರಿ ಘಟನೆಯೊಂದರಲ್ಲಿ ತನ್ನ ವಿವಾಹಪೂರ್ವ ಸಂಗಾತಿಯನ್ನು ಕೊಲೆ ಮಾಡಿ ಶವದೊಂದಿಗೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ನಂತರ ಅವನನ್ನು ಪೊಲೀಸರು ಬಂಧಿಸಿದ್ದಾರೆ.

'ದಯವಿಟ್ಟು ನನ್ನ ಸ್ವಾರ್ಥ ಪ್ರೀತಿಯನ್ನು ಕ್ಷಮಿಸಿಬಿಡಿ" ಎಂದು ಆ ಫೋಟೋಗೆ ಶೀರ್ಷಿಕೆ ನೀಡಿದ್ದ ಯುವಕ.

ಆರೋಪಿ ಕ್ವಿನ್ ಮತ್ತು ಸಂತ್ರಸ್ತೆ 'ಲಿನ್'ಳ ನಡುವೆ ನಡೆದ ಜಗಳ ತಾರಕಕ್ಕೇರಿ ಹಿಂಸಾತ್ಮಕ ರೂಪ ಪಡೆದು ಕ್ವಿನ್, ಲಿನ್ ಳನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಶವದೊಂದಿಗೆ ಸೆಲ್ಫಿ ತೆಗೆದ ಕ್ವಿನ್, ತಾವಿಬ್ಬರೂ ಸಂತಸದೊಂದಿದ್ದ ಫೋಟೋದೊಂದಿಗೆ ಈ ಫೋಟೊವನ್ನು ಕೂಡ ಅಪ್ಲೋಡ್ ಮಾಡಿದ್ದಾನೆ. ಇದು ನಂತರ ವೈರಲ್ ಆಗಿದೆ.

ನಂತರ ಈ ಯುವಕನ ಬೆನ್ನು ಹತ್ತಿದ ಪೊಲೀಸರು ೯ ಘಂಟೆಗಳ ನಂತರ ಕ್ವಿನ್ ನನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಆದರೆ ಲಿನ್ ಸಾವಿನ ಬಗ್ಗೆ ಪ್ರತಿಕ್ರಿಯಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement