ಸಾಂಕೇತಿಕ ಚಿತ್ರ 
ವಿದೇಶ

ಮಧ್ಯಪ್ರಾಚ್ಯ ರಾಷ್ಟ್ರ, ಐಎಸ್ ಉಗ್ರರಿಗೆ ಭಾರತ, ನೇಪಾಳ, ಬಾಂಗ್ಲಾದಿಂದ ಮಹಿಳೆಯರ ಮಾರಾಟ!

ಭಾರತ, ನೇಪಾಳ, ಬಾಂಗ್ಲಾದೇಶದ ಮಹಿಳೆಯರನ್ನು ಮದ್ಯಪ್ರಾಚ್ಯ ರಾಷ್ಟ್ರಗಳ ಲೈಂಗಿಕ ಗುಲಾಮಗಿರಿ ಮಾರುಕಟ್ಟೆ ಹಾಗೂ ಸಿರಿಯಾದ ಐಎಸ್ ಉಗ್ರರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಅಂಶ ಬಯಲಾಗಿದೆ.

ನವದೆಹಲಿ: ಭಾರತ, ನೇಪಾಳ, ಬಾಂಗ್ಲಾದೇಶದ ಮಹಿಳೆಯರನ್ನು ಮದ್ಯಪ್ರಾಚ್ಯ ರಾಷ್ಟ್ರಗಳ ಲೈಂಗಿಕ ಗುಲಾಮಗಿರಿ ಮಾರುಕಟ್ಟೆ ಹಾಗೂ ಸಿರಿಯಾದ ಐಎಸ್ ಉಗ್ರರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಅಂಶ ಬಯಲಾಗಿದೆ.

ಇತ್ತೀಚೆಗಷ್ಟೇ ನೇಪಾಳಿ ಯುವತಿಯರಿಗೆ ಸೌದಿ ಅರೇಬಿಯಾ ರಾಯಭಾರಿ ಕಚೇರಿಯ ಇಬ್ಬರು ನೌಕರರು ಲೈಂಗಿಕ ಕಿರುಕುಳ ನೀಡಿ, ಗ್ಯಾಂಗ್ ರೇಪ್ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಲೈಂಗಿಕ ಗುಲಾಮಗಿರಿ ಮಾರುಕಟ್ಟೆಗೆ ಮಹಿಳೆಯರ ಕಳ್ಳಸಾಗಣೆ ಸಾಗಣೆ ಮಾಡುವುದರಲ್ಲಿ ಏರ್ ಲೈನ್ಸ್ ಹಾಗೂ ವಲಸೆ ಅಧಿಕಾರಿಗಳೂ ಸಹ  ಭಾಗಿಯಾಗಿದ್ದು, ನವದೆಹಲಿ, ಮುಂಬೈ, ಕೋಲ್ಕತ್ತಾ ಇವರ ಚಟುವಟಿಗಳ ಕೆಂದ್ರ ಸ್ಥಾನಗಳು ಎಂದು ತಿಳಿದುಬಂದಿದೆ.

ವಿಮಾನ ನಿಲ್ದಾಣಗಳಲ್ಲಿ ನಿಗಾವಹಿಸಲು ವಲಸೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಂಡಿರುವ ಮಾನವ ಕಳ್ಳಸಾಗಣೆ ಮಾಡುವವರ ತಂಡ, ಮಹಿಳೆಯರನ್ನು ಮೊದಲು ಶ್ರೀಲಂಕಾಗೆ ಕಳಿಸಿ ಅಲ್ಲಿದ ಥಾಯ್ ಲ್ಯಾಂಡ್ ಬ್ಯಾಂಕಾಕ್ ಗೆ ಕಳಿಸಿ ಅಲ್ಲಿಂದ ಯುಎಇ,  ಕುವೈತ್, ಸೌದಿ ಅರೇಬಿಯಾಗೆ ತೆರಳಲು ಅಗತ್ಯವಿರುವ ನಕಲಿ ದಾಖಲೆ ಸೃಷ್ಟಿ ಮಾಡಿ ಕಳ್ಳಸಾಗಣೆ ಮಾಡುತ್ತಿದ್ದರು ಎಂದು  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ನವದೆಹಲಿ ಮೂಲಕ ಬಾಂಗ್ಲಾದ ಮಹಿಳೆಯರ ಕಳ್ಳಸಾಗಣೆ ನಡೆಯುತ್ತಿರುವುದರ ಬಗ್ಗೆ ಗುಪ್ತಚರ ಸಂಸ್ಥೆ ನವದೆಹಲಿಗೆ ಎಚ್ಚರಿಕೆ ನೀಡಿತ್ತು. ಈ ಕುರಿತು ಭಾರತದ ಭದ್ರತಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲು ನೇಪಾಳದ ಹಿರಿಯ ಅಧಿಕಾರೆಯೋಬ್ಬರು ಭಾರತಕ್ಕೆ ಆಗಮಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!