ಯುಬಿಎಸ್ ವಿಶ್ಲೇಷಣೆ: ನ್ಯೂಯಾರ್ಕ್ ದುಬಾರಿ ನಗರ
ಜಗತ್ತಿನಲ್ಲಿ ಜೀವನ ನಡೆಸಲು ಅತ್ಯಂತ ದುಬಾರಿ ನಗರ ಯಾವುದು ಗೊತ್ತಾ? ಅಮೆರಿಕದ ವಾಣಿಜ್ಯ ರಾಜಧಾನಿ ನ್ಯೂಯಾರ್ಕ್. ಯುಬಿಎಸ್ ನಡೆಸಿರುವ ವಿಶ್ಲೇಷಣೆಯಲ್ಲಿ ಈ ಅಂಶ ತಿಳಿದುಬಂದಿದೆ...
ನವದೆಹಲಿ: ಜಗತ್ತಿನಲ್ಲಿ ಜೀವನ ನಡೆಸಲು ಅತ್ಯಂತ ದುಬಾರಿ ನಗರ ಯಾವುದು ಗೊತ್ತಾ? ಅಮೆರಿಕದ ವಾಣಿಜ್ಯ ರಾಜಧಾನಿ ನ್ಯೂಯಾರ್ಕ್. ಯುಬಿಎಸ್ ನಡೆಸಿರುವ ವಿಶ್ಲೇಷಣೆಯಲ್ಲಿ ಈ ಅಂಶ ತಿಳಿದುಬಂದಿದೆ.
ಈ ಮಾಯಾನಗರಿಯಲ್ಲಿ ಸರಕು ಮತ್ತು ಸೇವಾ ತೆರಿಗೆಗಳು ಭಾರಿ ದುಬಾರಿ. ಜ್ಯೂರಿಚ್ ಮತ್ತು ಜಿನೀವಾ ನಂತರ ಸ್ಥಾನದಲ್ಲಿವೆ. ಸ್ವಿಜರ್ಲೆಂಡ್ನ ಈ ಎರಡೂ ನಗರಗಳು ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚು ದುಬಾರಿಯಾಗಿವೆ. ಆದರೆ ಮನೆ ಬಾಡಿಗೆಯನ್ನೂ ಸೇರಿಸಿದರೆ ಈ ನಗರಗಳು ನ್ಯೂಯಾರ್ಕ್ಗಿಂತ ಪರವಾಗಿಲ್ಲ. ಅಮೆರಿಕದ ಷಿಕಾಗೊ ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದರೆ, ಮಿಯಾಮಿ (11), ಲಾಸ್ಎಂಜಲೀಸ್ (13)ನೇ ಸ್ಥಾನದಲ್ಲಿವೆ.
ಕಳೆದ ವರ್ಷ 71 ನಗರಗಳ ಸಮೀಕ್ಷೆ ನಡೆಸಲಾಗಿದೆ. ಉಕ್ರೇನ್ನ ಕೀವ್ ಮತ್ತು ಬಲ್ಗೇರಿಯಾ ರಾಜಧಾನಿ ಸೊಫಿಯಾ ಅತಿ ಕಡಿಮೆ ವೆಚ್ಚದ ನಗರಗಳಾಗಿವೆ. ಸ್ವಿಜರ್ ಲೆಂಡ್ನ ನಗರಗಳಿಗೆ ಹೋಲಿಸಿದರೆ ಈ ನಗರಗಳಲ್ಲಿ ದರಗಳು 2.5 ಪಟ್ಟು ಕಡಿಮೆ. ಜ್ಯೂರಿಚ್, ಜಿನೀವಾ ಮತ್ತು ನ್ಯೂಯಾಕ್ರ್ ನಲ್ಲಿ ವೇತನಗಳೂ ಅಷ್ಟೇ ಪ್ರಮಾಣದಲ್ಲಿವೆ. ನೈರೋಬಿ, ಜಕಾರ್ತ ಮತ್ತು ಕೀವ್ಗೆ ಹೋಲಿಸಿದರೆ ಈ ದುಬಾರಿ ನಗರಗಳಲ್ಲಿನ ವೇತನ 19 ಪಟ್ಟು ಹೆಚ್ಚು.
ಸ್ವಿಜರ್ಲೆಂಡ್ ನಗರಗಳಲ್ಲಿ ಮನೆಗಾಗಿ ಖರೀದಿ ಪ್ರಮಾಣವೂ ಹೆಚ್ಚು. ಇಲ್ಲಿ ವರ್ಷಕ್ಕೆ 20 ಬ್ಯಾಸ್ಕೆಟ್ ಖರೀದಿಸಿದರೆ ಅಮೆರಿಕದಲ್ಲಿ 18, ಲಂಡನ್ ಮತ್ತು ಓಸ್ಲೊದಲ್ಲಿ 12 ಬ್ಯಾಸ್ಕೆಟ್ ಖರೀದಿಸುತ್ತಾರೆ. ಒಂದು ಐಫೋನ್ 6 ಖರೀದಿಸಲು ನ್ಯೂಯಾರ್ಕ್ನ ಜನ 24 ಗಂಟೆ, ಜಿನೀವಾದಲ್ಲಿರುವವರು 20.6 ಗಂಟೆ ಕೆಲಸ ಮಾಡಿದರೆ ಸಾಕು. ಇದಕ್ಕಾಗಿ ಚೀನಾದ ಶಾಂಘೈನವರು 163.8 ಗಂಟೆ, ಪಿಲಿಫೈನ್ಸ್ ನ ಮನಿಲಾದಲ್ಲಿರುವವರು ಗಂಟೆಗಿಂತಲೂ ಹೆಚ್ಚು ಕೆಲಸ ಮಾಡುತ್ತಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.