ಇಸ್ಲಾಮಾಬಾದ್ : ಭಾರತದೊಂದಿಗಿನ ತನ್ನ ನಿಲುವಿನಲ್ಲಿ ದಿನಕ್ಕೊಂದು ಹೇಳಿಕೆ ನೀಡುವ ಪಾಕಿಸ್ತಾನ ಇದೀಗ ಹೊಸ ವರಸೆ ಆರಂಭಿಸಿದೆ. ಭಾರತದೊಂದಿಗಿನ ಶಾಂತಿ ಮಾತುಕತೆ ಮುಂದುವರಿಯುತ್ತಲೇ ಇರುತ್ತದೆ, ಭಾರತ ಮುಂದೆ ಬರಬೇಕಾಗಿದೆ ಎಂದು ಹೇಳಿದೆ.
'ಭಾರತದೊಂದಿಗಿನ ಶಾಂತಿ ಮಾತುಕತೆ ಮುಂದುವರಿಯುವುದು ಅನುಮಾನ ಎಂದು ಭಾರತದಲ್ಲಿನ ಪಾಕ್ ಹೈಕಮಿಶನರ್ ಅಬ್ದುಲ್ ಬಾಸಿತ್ ಕೆಲ ದಿನಗಳ ಹಿಂದೆ ಹೇಳಿದ್ದರು.ಆದರೆ ಇದೀಗ ಅಲ್ಲಿನ ವಿದೇಶ ವ್ಯವಹಾರಗಳ ಸಚಿವಾಲಯ ವಕ್ತಾರ ನಫೀಸ್ ಝಕಾರಿಯಾ, "ಭಾರತದೊಂದಿಗಿನ ಶಾಂತಿ ಮಾತುಕತೆ ಪ್ರಕ್ರಿಯೆಗೆ ಹಾದಿ ಮುಕ್ತವಾಗಿದೆ ಎಂದು ಹೇಳಿದ್ದಾರೆ.
ಇಸ್ಲಾಮಾಬಾದ್ ನಲ್ಲಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಉಭಯ ದೇಶಗಳ ನಡುವಿನ ಸೌಹಾರ್ದ ಸಂಬಂಧ ವೃದ್ಧಿಯಾಗಲು ಶಾಂತಿ ಮಾತುಕತೆಯೊಂದೇ ದಾರಿ ಎಂದು ಹೇಳಿದ್ದಾರೆ. ಮೊನ್ನೆ ಏಪ್ರಿಲ್ 7ರಂದು ನವದೆಹಲಿಯಲ್ಲಿ ಪಾಕ್ ಹೈಕಮಿಶನರ್ ಅಬ್ದುಲ್ ಬಾಸಿತ್, "ಭಾರತ-ಪಾಕ್ ನಡುವೆ ವಿದೇಶ ಕಾರ್ಯದರ್ಶಿಗಳ ಮಟ್ಟದ ಶಾಂತಿ ಮಾತುಕತೆಯ ಸದ್ಯಕ್ಕೆ ನಡೆಯುವುದಿಲ್ಲ ಎಂದು ಹೇಳಿದ್ದರು.