ವಿದೇಶ

ಕಾಂಬೋಡಿಯಾ: ಬಿಸಿಲಿನಲ್ಲಿ ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದ ಆನೆ ಹೃದಯಾಘಾತದಿಂದ ಸಾವು

Manjula VN

ಕಾಂಬೋಡಿಯಾ: ಬಿಸಿಲಿನ ಝಳಕ್ಕೆ ಕೇವಲ ಮನುಷ್ಯರಲ್ಲದೆ, ಪ್ರಾಣಿಗಳು ಕೂಡ ತತ್ತರಿಸಿಹೋಗಿದ್ದು, ಪ್ರವಾಸಿಗರನ್ನು ಹೊತ್ತೊಯ್ಯಿದ್ದ ಆನೆಯೊಂದು ಬಿಸಿಲಿನ ಧಗೆ ತಾಳಲಾರದೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆಯೊಂದು ಆಗ್ನೇಯ ಏಷ್ಯಾದ ಕಾಂಬೋಡಿಯಾದಲ್ಲಿ ನಡೆದಿದೆ.

ಕಾಂಬೋಡಿಯಾದ ವಾಟ್ ದೇವಾಲಯದಲ್ಲಿ 40 ಡಿಗ್ರಿ ತಾಪಮಾನದಲ್ಲೂ ಸಾಂಬೋ ಎಂಬ ಹೆಣ್ಣು ಆನೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ವೈದ್ಯರು ಚಿಕಿತ್ಸೆ ನೀಡಲು ಆರಂಭಿಸಿದ್ದಾರಾದರೂ ಅಷ್ಟರಲ್ಲಾಗಲೇ ಸಾಂಬೋ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಇನ್ನು ಸಾಂಬೋ ಸಾವನ್ನಪ್ಪುವುದಕ್ಕೆ ಹೆಚ್ಚಿದ ತಾಪಮಾನವೇ ಕಾರಣ ಎಂದು ಹೇಳಲಾಗುತ್ತಿದ್ದು, ಆಮ್ಲಜನಕದ ಕೊರತೆಯುಂಟಾದ ಕಾರಣ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದೆ ಎನ್ನಲಾಗಿದೆ.

ಸಾಂಬೋ ಹೆಣ್ಣು ಆನೆ ಕಳೆದ 15 ವರ್ಷಗಳಿಂದ ಅಂಕಾರ್ ಎಲಿಫೆಂಟ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಹೃದಯಾಘಾತದಿಂದ ಆನೆ ಸಾವನ್ನಪ್ಪಿರುವುದಕ್ಕೆ ಪ್ರಾಣಿ ದಯಾ ಸಂಘಟನೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿವೆ. ಅಲ್ಲದೆ ಅಂಕೋರಾದಲ್ಲಿ ಆನೆ ಸವಾರಿಗೆ ನಿಷೇಧ ಹೇರುವಂತೆ ಆಗ್ರಹಿಸಿವೆ.

SCROLL FOR NEXT