ಹುನಾನ್ ಪ್ರಾಂತ್ಯದಲ್ಲಿ ನಿರ್ಮಾಣವಾಗಿರುವ ಗಾಜಿನ ಸೇತುವೆ (ಎಎಫ್ ಪಿ ಚಿತ್ರ) 
ವಿದೇಶ

ವಿಶ್ವದ ಅತೀ ದೊಡ್ಡ ಗಾಜಿನ ಸೇತುವೆ ಲೋಕಾರ್ಪಣೆ ಮಾಡಿದ ಚೀನಾ

ವಿವಿಧ ಬಗೆಯ ವಿನೂತ ನಿರ್ಮಾಣಗಳನ್ನು ಮಾಡುವ ಮೂಲಕ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಚೀನಾ ಇದೀಗ ಮತ್ತೊಂದು ವಿಶ್ವದಾಖಲೆಯ ಗಾಜಿನ ಸೇತುವೆಯನ್ನು ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿದೆ.

ಬೀಜಿಂಗ್: ವಿವಿಧ ಬಗೆಯ ವಿನೂತ ನಿರ್ಮಾಣಗಳನ್ನು ಮಾಡುವ ಮೂಲಕ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಚೀನಾ ಇದೀಗ ಮತ್ತೊಂದು ವಿಶ್ವದಾಖಲೆಯ ಗಾಜಿನ  ಸೇತುವೆಯನ್ನು ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿದೆ.

ಚೀನಾದ ಹುನಾನ್ ಪ್ರಾಂತ್ಯದಲ್ಲಿ ಬೃಹತ್ ಗಾಜಿನ ಸೇತುವೆಯನ್ನು ನಿರ್ಮಿಸಲಾಗಿದ್ದು, ವಿಶ್ವದ ಅತಿ ಎತ್ತರದ ಮತ್ತು ಅತಿ ಉದ್ದದ ಗಾಜು ಸೇತುವೆ ಎಂಬ ಖ್ಯಾತಿಗೆ ಒಳಗಾಗಿದೆ. ಹುನಾನ್  ಪ್ರಾಂತ್ಯದಲ್ಲಿರುವ ಎರಡು ಬೆಟ್ಟಗಳ ನಡುವೆ ಈ ಸೇತುವೆ ನಿರ್ಮಾಣವಾಗಿದ್ದು, ಈ ಸೇತುವೆ ಸಮುದ್ರಮಟ್ಟದಿಂದ ಸುಮಾರು 1,410 ಅಡಿ (430 ಮೀಟರ್) ಎತ್ತರದಲ್ಲಿದೆ.

ಪ್ರವಾಸಿಗರ ಆಕರ್ಷಣೆಗೆ ತಯಾರಾಗಿರುವ ಸೇತುವೆಯಲ್ಲಿ ಮೂರು ಪದರ ಗಾಜಿನ ಕೋಟಿಂಗ್ ಇದ್ದು, ಇದರ ಮೇಲೆ ನಡೆದುಕೊಂಡು ಆಳದ ಭೂಮಿಯ ವೀಕ್ಷಣೆ ಮಾಡುವುದು ರೋಮಾಂಚನ  ಎಂದು ಬಣ್ಣಿಸಲಾಗಿದೆ. ಈ ಬೃಹತ್ ಸೇತುಗೆ 3 ಪದರಗಳ 99 ಬೃಹತ್ ಗಾಜಿನ ಫಲಕಗಳನ್ನು ಅಳವಡಿಸಲಾಗಿದೆ. ಈ ಗಾಜಿನ ಸೇತುವೆ ನಿರ್ಮಾಣಕ್ಕಾಗಿ ಚೀನಾ ಸುಮಾರ 3.4 ಬಿಲಿಯನ್  ವ್ಯಯಿಸಿದೆ.

ಮೂಲಗಳ ಪ್ರಕಾರ ಈ ಬೃಹತ್ ಸೇತುವೆ 6 ಮೀಟರ್ ಅಗಲವಿದ್ದು, ಇಸ್ರೇಲ್ ಮೂಲದ ನಿರ್ಮಾಣ ಸಂಸ್ಥೆ ಹೇಮ್ ಡೊಟಾನ್ ಈ ಗಾಜಿನ ಸೇತುವೆಯನ್ನು ನಿರ್ಮಿಸಿದೆ. ಆ ಮೂಲಕ ವಿಶ್ವದ  ಅತೀ ದೊಡ್ಡ ಗಾಜಿನ ಸೇತುವೆ ನಿರ್ಮಾಣ ಮಾಡಿದ ಸಂಸ್ಥೆ ಎಂಬ ಖ್ಯಾತಿ ಪಡೆದಿದೆ. ಇನ್ನು ಪ್ರತೀ ದಿನ ಈ ಸೇತುವೆ ವೀಕ್ಷಣೆಗೆ ಗರಿಷ್ಠ 8 ಸಾವಿರ ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಜೂನ್​ನಲ್ಲಿ ರಕ್ಷಣೆ ಪರೀಕ್ಷೆ ನಡೆಸಿದ್ದ ಚೀನಾ ಇದೀಗ ಸೇತುವೆಯನ್ನು ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ.

‘ಅವತಾರ್’ ಎಂಬ ಹಾಲಿವುಡ್​ನ ಸೂಪರ್​ಹಿಟ್ ಚಿತ್ರದ ಕೆಲಭಾಗವನ್ನು ಇದೇ ತಿಯಾನ್ಮನ್ ಮೌಂಟೇನ್ ನ್ಯಾಷನಲ್ ಪಾರ್ಕ್ ಬೆಟ್ಟದ ತಪ್ಪಲಲ್ಲಿ ಶೂಟಿಂಗ್ ಮಾಡಲಾಗಿತ್ತು ಎಂಬುದು ವಿಶೇಷ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್