2014ರಲ್ಲಿ ಇಸಿಸ್ ನಡೆಸಿದ ಸೈನಿಕರ ಹತ್ಯಾಕಾಂಡ (ಸಂಗ್ರಹ ಚಿತ್ರ) 
ವಿದೇಶ

2014 ಇರಾಕ್ ಸೈನಿಕರ ಹತ್ಯಾಕಾಂಡ; 36 ಇಸಿಸ್ ಉಗ್ರರಿಗೆ ಗಲ್ಲುಶಿಕ್ಷೆ

2014ರಲ್ಲಿ ಇಸಿಸ್ ನಡೆಸಿದ ಸೈನಿಕರ ಹತ್ಯಾಕಾಂಡ ಸಂಬಂಧ ಬಂಧಿತರಾಗಿದ್ದ 36 ಮಂದಿ ಉಗ್ರರನ್ನು ಇರಾಕ್ ಸರ್ಕಾರ ಭಾನುವಾರ ಗಲ್ಲಿಗೇರಿಸಿದೆ.

ಬಾಗ್ದಾದ್: 2014ರಲ್ಲಿ ಇಸಿಸ್ ನಡೆಸಿದ ಹತ್ಯಾಕಾಂಡ ಸಂಬಂಧ ಬಂಧಿತರಾಗಿದ್ದ 36 ಮಂದಿ ಉಗ್ರರನ್ನು ಇರಾಕ್ ಸರ್ಕಾರ ಭಾನುವಾರ ಗಲ್ಲಿಗೇರಿಸಿದೆ.

2014ರಲ್ಲಿ ಇಸಿಸ್ ಉಗ್ರಗಾಮಿ ಸಂಘಟನೆ ಇರಾಕ್ ಸೇನೆಯ ವಶದಲ್ಲಿದ್ದ ಟಿಕ್ರಿತ್ ನಗರವನ್ನು ತನ್ನ ವಶಕ್ಕೆ ಪಡೆಯುವ ವೇಳೆ ವ್ಯಾಪಕ ಹಿಂಸಾಚಾರ ನಡೆಸಿತ್ತು. ಈ ವೇಳೆ ತನ್ನ ಕೈಗೆ ಸಿಕ್ಕ  ಇರಾಕ್ ನ ನೂರಾರು ಸೈನಿಕರನ್ನು ಅಮಾನುಷವಾಗಿ ಹತ್ಯೆಗೈದಿತ್ತು. ಸರ್ಕಾರಿ ಮೂಲಗಳ ಪ್ರಕಾರ ಹೀಗೆ ಇಸ್ಲಾಮಿಕ್ ಸ್ಟೇಟ್ ಉಗ್ರರ ಕೈಗೆ ಸಿಕ್ಕಿ ಸುಮಾರು 1700ಕ್ಕೂ ಅಧಿಕ ಇರಾಕ್ ಸೈನಿಕರು  ಧಾರುಣವಾಗಿ ಹತರಾಗಿದ್ದರು.

ಸೈನಿಕರನ್ನು ಸಾಲಾಗಿ ಮಲಗಿಸಿ ಅವರ ಮೇಲೆ ಧಾರುಣವಾಗಿ ಗುಂಡು ಹಾರಿಸಿ ಸಾಮೂಹಿಕವಾಗಿ ಹತ್ಯೆಗೈಯ್ಯಲಾಗಿತ್ತು. ಘಟನೆ ಬಳಿಕ ಇಸಿಸ್ ವಿರುದ್ಧ ಮುಗಿಬಿದ್ದಿದ್ದ ಇರಾಕ್ ಸೇನೆ 36ಕ್ಕೂ  ಹೆಚ್ಚು ಉಗ್ರರನ್ನು ಬಂಧಿಸಿತ್ತು. ಬಂಧಿತ ಉಗ್ರರ ಪೈಕಿ 36 ಮಂದಿ ಉಗ್ರರಿಗೆ ಇಂದು ದಕ್ಷಿಣ ಇರಾಕ್ ನ ನಸರಿಯಾಹ್ ಬಂಧೀಖಾನೆಯಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ