ಲಂಡನ್: ಖ್ಯಾತ ಬ್ರಿಟೀಷ್ ಪಾಪ್ ಗಾಯಕ ಜಾರ್ಜ್ ಮೈಕೆಲ್ ಭಾನುವಾರ ನಿಧನರಾಗಿದ್ದು, ಅವರಿಗೆ 53 ವರ್ಷ ವಯಸ್ಸಾಗಿತು.
ಬ್ರಿಟನ್ ನ ಥಾಮಸ್ ವ್ಯಾಲಿಯಲ್ಲಿರುವ ಮನೆಯಲ್ಲಿ ನಿನ್ನೆ ರಾತ್ರಿ ನಿದ್ರಾಸ್ಥಿತಿಯಲ್ಲಿರುವಾಗಲೇ ಮೈಕಲ್ ಜಾರ್ಜ್ ನಿಧನರಾಗಿದ್ದಾರೆ ಎಂದು ಅವರು ಕುಟುಂಬ ಮೂಲಗಳು ತಿಳಿಸಿವೆ. ನಿನ್ನೆ ಕ್ರಿಸ್ ಮಸ್ ದಿನಾಚರಣೆ ಸಂಭ್ರಮಾಚರಣೆ ಮುಗಿಸಿ ತಮ್ಮ ಕೊಠಡಿಗೆ ತೆರಳಿ ನಿದ್ರೆಗೆ ಜಾರಿದ್ದರು. ಆದರೆ ರಾತ್ರಿಯೇ ಅವರು ಚಿರನಿದ್ರೆಗೆ ಜಾರಿದ್ದಾರೆ. 1980ರ ದಶಕದಲ್ಲಿ ಖ್ಯಾತಿಯ ಉತ್ತುಂಗದಲ್ಲಿದ್ದ ಜಾರ್ಜ್ ಮೈಕೆಲ್ ಹಲವು ಪ್ರದರ್ಶನಗಳನ್ನು ನೀಡಿದ್ದರು. ಅವರ ಸಾಕಷ್ಟು ಆಲ್ಬಮ್ ಗಳು ಅಭಿಮಾನಿಗಳ ಮನಸೂರೆಗೊಂಡಿತ್ತು.
ಅವರ ವೇಕ್ ಅಪ್ ಮಿ ಬಿಫೋರ್ ಯು ಗೋ ಗೋ, ಕೇರ್ಲೆಸ್ ವಿಸ್ಪರ್ ಹಾಡುಗಳು ಇಂದಿಗೂ ಅಭಿಮಾನಿಗಳನ್ನು ರಂಜಿಸುತ್ತಿವೆ. ಹಲವು ಗಾಯಕರು ಅವರ ಹಾಡುಗಳನ್ನು ತಮ್ಮದೇ ಶೈಲಿಯಲ್ಲಿ ಹಾಡುತ್ತಿದ್ದರು. ಮೈಕೆಲ್ ಜಾರ್ಜ್ ನಿಧನಕ್ಕೆ ಹಾಲಿವುಡ್ ಸೇರಿದಂತೆ ಬ್ರಿಟನ್ ಚಿತ್ರರಂಗದ ಹಲವು ಖ್ಯಾತನಾಮರು ಸಂತಾಪ ವ್ಯಕ್ತಪಡಿಸಿದ್ದಾರೆ.