ಬೀಜಿಂಗ್: ವಿಶ್ವದ ಅತಿ ಹಿರಿಯ ಪುರುಷ ಪಾಂಡಾ ಪಾನ್ ಪಾನ್ ಡಿಸೆಂಬರ್ 28 ರಿಂದ ಕ್ಯಾನ್ಸರ್ ನಿಂದ ಚೀನಾದಲ್ಲಿ ಸಾವನ್ನಪ್ಪಿದೆ ಎಂದು ಚೀನಾದ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಪಾನ್ ಪಾನ್ ಗೆ 31 ವರ್ಷವಾಗಿತ್ತು. ದಕ್ಷಿಣ ಚೀನಾದ ಚೆಂಗ್ಡುವಿನಲ್ಲಿ ತನ್ನ 30 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿತ್ತು. ಪಾಂಡಾದ ಸಾವು ಯಾವುದೇ ಸಂಶಯಕ್ಕೆಡೆ ಮಾಡಿಲ್ಲ.
ಪಾಂಡಾದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕಳೆದ ಮೂರು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿತ್ತು. 1985 ರಲ್ಲಿ ಪಾನಾ ಪಾನ್ ಜನಿಸಿತ್ತು. ವಯೋ ಸಹಸ ಕಾಯಿಲೆಗಳಾದ ಕ್ಯಾಟರಾಕ್ಟ್ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವರ್ಷದ ಜೂನ್ ನಲ್ಲಿ ಕ್ಯಾನ್ಸರ್ ಗೆ ಪಾಂಡಾಗೆ ಚಿಕಿತ್ಸೆ ಕೊಡಿಸಲಾಗಿತ್ತು.