ಸಾಂದರ್ಭಿಕ ಚಿತ್ರ 
ವಿದೇಶ

ಅಮೆರಿಕದ ಕನೆಕ್ಟಿಕಟ್ ನಲ್ಲಿ ಶೂಟೌಟ್, ಇಬ್ಬರು ಸಾವು. ಇಬ್ಬರಿಗೆ ಗಾಯ

ಸಂಗೀತ ಕಾರ್ಯಕ್ರಮದ ನಂತರ ಅಮೆರಿಕದ ಕನೆಕ್ಟಿಕಟ್ ನ ಚಿತ್ರಮಂದಿರದ ಹೊರಗಡೆ ಶುಕ್ರವಾರ ತಡರಾತ್ರಿ ಶೂಟೌಟ್ ನಡೆದಿದ್ದು,...

ವಲ್ಲಿಂಗ್ ಫೋರ್ಡ್: ಸಂಗೀತ ಕಾರ್ಯಕ್ರಮದ ನಂತರ ಅಮೆರಿಕದ ಕನೆಕ್ಟಿಕಟ್ ನ ಚಿತ್ರಮಂದಿರದ ಹೊರಗಡೆ ಶುಕ್ರವಾರ ತಡರಾತ್ರಿ ಶೂಟೌಟ್ ನಡೆದಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರ್ಯಾಪರ್ ಮೀಕ್ ಮಿಲ್ ಕಾರ್ಯಕ್ರಮದ ನಂತರ ಒಕ್ಡಾಲೆ ಚಿತ್ರಮಂದರಿದ ಹೊರಗಡೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಲ್ಲಿಂಗ್ ಫೋರ್ಡ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಪೊಲೀಸರು ಮೃತರ ಮತ್ತು ಗಾಯಾಳುಗಳ ಹೆಸರನ್ನು ಬಿಡುಗಡೆ ಮಾಡಿಲ್ಲ. ಅಲ್ಲದೆ ಈ ಸಂಬಂಧ ಇದುವರೆಗೂ ಯಾರನ್ನು ಬಂಧಿಸಿಲ್ಲ ಮತ್ತು ತಕ್ಷಣಕ್ಕೆ ಶಂಕಿತರ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಒಕ್ಡಾಲೆ ಚಿತ್ರಮಂದರಿದ ಸಮೀಪದಲ್ಲೇ ಮೀಕ್ ಮಿಲ್ ಅವರ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮ ಮುಗಿದ ತಕ್ಷಣವೇ ಶೂಟೌಟ್ ನಡೆದಿದೆ ಎಂದು ಲೆಫ್ಟಿನೆಂಟ್ ಚೆರಿಲ್ ಬ್ರಾಡ್ಲಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

ಬೇಕಾದರೆ ನನ್ನ ವಿರುದ್ಧವೂ ಫಾರ್ಮ್‌ - 7 ಸಲ್ಲಿಸಿ: ಕಾಂಗ್ರೆಸ್'ಗೆ BJP ಸಂಸದ ಯದುವೀರ್ ಒಡೆಯರ್ ಸವಾಲು