ಅಮೆರಿಕ: ಅಮೆರಿಕದ ಮುಂದಿನ ಅಧ್ಯಕ್ಷ ಚುನಾವಣೆ ಸಂಬಂಧ ಚುನಾವಣೆ ಪೂರ್ವಭಾವಿಯಾಗಿ ಡೆಮಾಕ್ರಟಿಕ್ ಹಾಗೂ ರಿಪಬ್ಲಿಕನ್ ಪಕ್ಷಗಳ ಕೌಕಸ್(ಅಧ್ಯಕ್ಷೀಯ ಚುನಾವಣೆಯ ಮೊದಲ ಹಂತ)ನಲ್ಲಿ ಡೋನಾಲ್ಡ್ ಟ್ರಂಪ್ ವಿರುದ್ಧ ಟೆಡ್ ಕ್ರೂಜ್ ಜಯ ಗಳಿಸಿದ್ದಾರೆ.
ಇಯೋವಾ ಕೌಕಸ್ ನಲ್ಲಿ ಟೆಡ್ ಕ್ರೂಜ್ 28 ಮತಗಳನ್ನು ಪಡೆದಿದ್ದಾರೆ. ಇನ್ನು ಡೋನಾಲ್ಡ್ ಟ್ರಂಪ್ 24 ಮತಗಳನ್ನು ಪಡೆದಿದ್ದು, 4 ಮತಗಳ ಅಂತರದಲ್ಲಿ ಟೆಡ್ ಕ್ರೂಜ್ ಜಯ ಗಳಿಸಿದ್ದಾರೆ.
ಇನ್ನು ಡೆಮಾಕ್ರಟಿಕ್ ಪಕ್ಷದಲ್ಲಿ ಕಣದಲ್ಲಿರುವ ಹಿಲರಿ ಕ್ಲಿಂಟನ್ ಹೆಚ್ಚು ಜನಪ್ರಿಯವಾಗಿದ್ದು, ಹಿಲರಿಗೆ ನೇರ ಸ್ಪರ್ಧಿಯಾಗಿರುವ ಬೆರ್ನಿ ಸ್ಯಾಂಡರ್ಸ್ ಕಠಿಣ ಸ್ಪರ್ಧೆ ನೀಡುತ್ತಿದ್ದಾರೆ.
ಹಿಲರಿ ಹೆಚ್ಚು ಜನಪ್ರಿಯತೆ ಹೊಂದಿದ್ದು, ಬಹುತೇಕರು ಹಿಲರಿಯನ್ನೇ ಆರಿಸುವ ಸಾಧ್ಯತೆ ಹೆಚ್ಚಿದ್ದರೂ, ಅಧಿಕಾರ ವಲಯಕ್ಕಿಂತ ಹೊರಗಿರುವವರನ್ನೇ ಡೆಮಾಕ್ರಟಿಕ್ ಹೆಚ್ಚು ಮೆಚ್ಚುತ್ತಾರೆ. ಹೀಗಾಗಿ ಮತಪರಿವರ್ತನೆ ಪ್ರಮಾಣದ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ. ಹಿಲರಿಗೆ ನೇರವಾಗಿ ಕಠಿಣ ಸ್ಪರ್ಧೆ ಒಡ್ಡುತ್ತಿರುವವರು ಬೆರ್ನಿ ಸ್ಯಾಂಡರ್ಸ್. ಅಭ್ಯರ್ಥಿ ಆಯ್ಕೆಯ ಆರಂಭದ ಚುನಾವಣೆಗಳಲ್ಲಿ ಇವರು ಹೆಚ್ಚಿನ ಪ್ರಮಾಣದ ಮತ ಗಳಿಸುವ ಎಲ್ಲ ಸಾಧ್ಯತೆಗಳೂ ಇವೆ. ಒಬಾಮ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿದಿರುವ ಬೆರ್ನಿ ಪ್ರಶ್ನೆಗಳೇ ಹೆಚ್ಚು ಮತಗಳನ್ನು ಸೆಳೆಯುವ ಸಾಧ್ಯತೆಯಿದೆ.