ಸ್ಪೋಟದಿಂದ ವಿಮಾನದಲ್ಲಿ ಉಂಟಾಗಿರುವ ರಂದ್ರ (ಚಿತ್ರಕೃಪೆ: ಸೊಮಾಲಿಯಾ ಲೇಟೆಸ್ಟ್ ಫೋಟೋ) 
ವಿದೇಶ

ಆಗಸದಲ್ಲಿದ್ದ ವಿಮಾನದೊಳಗೆ ಸ್ಫೋಟ; ಪವಾಡ ಸದೃಶವಾಗಿ ವಿಮಾನ ಕೆಳಗಿಳಿಸಿದ ಪೈಲಟ್..!

ಆಕಾಶಾದಲ್ಲಿ ಹಾರಾಟ ಮಾಡುತ್ತಿದ್ದ ಪ್ರಯಾಣಿಕ ವಿಮಾನದೊಳಗೆ ಸ್ಫೋಟಗೊಂಡಿದ್ದು, ಪವಾಡ ಸದೃಶವಾಗಿ ವಿಮಾನವನ್ನು ಪೈಲಟ್ ಕೆಳಗಿಳಿಸಿದ ಘಟನೆ ಮೊಗದಿಶು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ...

ಸೋಮಾಲಿಯಾ: ಆಕಾಶಾದಲ್ಲಿ ಹಾರಾಟ ಮಾಡುತ್ತಿದ್ದ ಪ್ರಯಾಣಿಕ ವಿಮಾನದೊಳಗೆ ಸ್ಫೋಟಗೊಂಡಿದ್ದು, ಪವಾಡ ಸದೃಶವಾಗಿ ವಿಮಾನವನ್ನು ಪೈಲಟ್ ಕೆಳಗಿಳಿಸಿದ ಘಟನೆ ಮೊಗದಿಶು  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ದಾಲೋ ಏರ್​ಲೈನ್ಸ್​ಗೆ ಸೇರಿದ ಖಾಸಗಿ ವಿಮಾನ ಸೋಮಾಲಿಯಾದ ಮೊಗದಿಶು ವಿಮಾನ ನಿಲ್ದಾಣದಿಂದ ಆಫ್ರಿಕಾದ ಜಿಬೌತಿಗೆ ಹೊರಟಿತ್ತು. ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ ಸುಮಾರು 74  ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ವಿಮಾನದ ಒಳಗೆ ಭಾರಿ ಸ್ಫೋಟದ ಸದ್ದು ಕೇಳಿಬಂದಿದ್ದು, ಸ್ಫೋಟದ ಸದ್ದು ಕೇಳುತ್ತಿದ್ದಂತೆಯೇ  ಪೈಲಟ್ ವಿಮಾನವನ್ನು ಮೊಗದಿಶು ವಿಮಾನ ನಿಲ್ದಾಣದಲ್ಲಿ ಇಳಿಸಿದ್ದಾನೆ.



ಘಟನೆಯಲ್ಲಿ ವಿಮಾನದ ಒಂದು ಕಿಟಕಿಯ ಭಾಗದಷ್ಟು ಜಾಗದಲ್ಲಿ ದೊಡ್ಡ ರಂದ್ರವಾಗಿದ್ದು, ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದು, ಉಳಿದೆಲ್ಲ ಪ್ರಯಾಣಿಕರು ಪವಾಡಸದೃಶವಾಗಿ  ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮತ್ತೊಂದು ಮೂಲದ ಪ್ರಕಾರ ವಿಮಾನದಲ್ಲಿ ಉಂಟಾಗಿದ್ದ ರಂದ್ರದಲ್ಲಿ ಪ್ರಯಾಣಿಕನೊಬ್ಬ ಬಿದ್ದು ಹೋಗಿದ್ದಾನೆ ಎನ್ನುವ ಮಾತುಗಳು  ಕೇಳಿಬಂದಿವೆ. ಆದರೆ ಈ ಬಗ್ಗೆ ವಿಮಾನಯಾನ ಸಂಸ್ಥೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ವಿಮಾನ ಚಲಾಯಿಸುತ್ತಿದ್ದ ಪೈಲಟ್ ವ್ಲಾಡಿಮಿರ್ ವಡೋಪಿವೆಕ್ ಹೇಳಿದಂತೆ, ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನದ ಒಳಗೆ ದೊಡ್ಡ ಸ್ಫೋಟದ ಶಬ್ದ ಕೇಳಿಸಿತು. ನನಗೆ ಇದು  ಬಾಂಬ್ ಎನ್ನಿಸಿತು. ಹೀಗಾಗಿ ಕೂಡಲೇ ವಾಯುಗೋಪುರಕ್ಕೆ ಸಂದೇಶ ರವಾನಿಸಿ ವಿಮಾನವನ್ನು ಕೆಳಗಿಳಿಸಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!