ವಿದೇಶ

ಪಾಕ್ ನಲ್ಲಿ ರಾಷ್ಟ್ರೀಯ ಗುರುತು ಪತ್ರ ಅಕ್ರಮವಾಗಿ ಹೊಂದಿದ್ದ ಭಾರತೀಯ ಸೆರೆ

Mainashree
ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರೀಯ ಗುರುತು ಚೀಟಿಯನ್ನು ಅಕ್ರಮವಾಗಿ ಹೊಂದಿದ್ದ ಭಾರತೀಯರೊಬ್ಬರನ್ನು ಪಾಕಿಸ್ತಾನದಲ್ಲಿ ಫೆಡರಲ್ ತನಿಖಾ ಏಜೆನ್ಸಿ ಬಂಧಿಸಿದೆ.
ರುಸ್ತಮ್ ಸಾಧುವಾ ಬಂಧಿತಕ್ಕೊಳಗಾದ ಭಾರತೀಯ. ಈತ ಪಾಕಿಸ್ತಾನದಲ್ಲಿ 1982ರಿಂದಲೂ ನೆಲೆಸಿದ್ದಾರೆ. ಪಾಕಿಸ್ತಾನದ ಗುರುತು ಚೀಟಿಯನ್ನು ಕೇವಲ ಅಲ್ಲಿನ ಪ್ರಜೆಗಳಿಗೆ ಮಾತ್ರ ನೀಡಲಾಗುತ್ತದೆ. ಆದರೆ, ಭಾರತೀಯನಾದ ರುಸ್ತಮ್ ಅಕ್ರಮವಾಗಿ ಗುರುತು ಚೀಟಿಯನ್ನು ಹೊಂದಿದ್ದರು ಎಂದು ಆರೋಪ ಮಾಡಲಾಗಿದೆ. 
1982ರಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ ರುಸ್ತಮ್ ಸಾಧುವಾ ಅಲ್ಲೇ ನೆಲೆಸಿದ್ದಾರೆ. ರುಸ್ತಮ್ ಪಾಕಿಸ್ತಾನದ ಪ್ರಭಾವಿ ಅಲ್ಪಸಂಖ್ಯಾತ ಶಾಸಕ ಅಸ್ಫಾನ್ ಧ್ಯಾರ್ ಅವರ ಭಾವ ಹಾಗೂ ಎಂಪಿ ಭಾಂದ್ರಾ ಅವರು ಅಳಿಯರಾಗಿದ್ದಾರೆ. ಎಂಪಿ ಭಾಂದ್ರಾ ಅವರ ಸಾವಿನ ನಂತರ ಎರಡು ಕುಟುಂಬಗಳ ನಡುವೆ ಆಸ್ತಿ ಹಂಚಿಕೆಯಲ್ಲಿ ಜಗಳ ನಡೆಯುತ್ತಿತ್ತು.
SCROLL FOR NEXT