ಮಹಾಚಕ್ರಿ ಸಿರಿಂಧೋರ್ನ್ 
ವಿದೇಶ

ರಾಜಕುಮಾರಿಯ ಒಂದು ದಿನದ ಭೇಟಿಗಾಗಿ 27. ಲಕ್ಷ ರು. ವೆಚ್ಚದಲ್ಲಿ ಶೌಚಾಲಯ ನಿರ್ಮಾಣ

ಥಾಯ್ಲೆಂಡ್ ರಾಜಕುಮಾರಿ ಭೇಟಿ ನೀಡುತ್ತಿರುವ ಒಂದು ದಿನದ ಭೇಟಿಗಾಗಿ ಹವಾ ನಿಯಂತ್ರಿತ ಹೊರಮನೆ ಮತ್ತು ಐಷಾರಾಮಿ ಟಾಯ್ಲೆಟ್ ನಿರ್ಮಿಸಲು 27.45 ಲಕ್ಷ ರೂ. ವೆಚ್ಚ ಮಾಡಿರುವುದು ..

ಬ್ಯಾಂಕಾಕ್:  ಕಾಂಬೋಡಿಯಾದ ಬಡ ಪ್ರಾಂತ್ಯವೊಂದಕ್ಕೆ ಥಾಯ್ಲೆಂಡ್ ರಾಜಕುಮಾರಿ ಭೇಟಿ ನೀಡುತ್ತಿರುವ ಒಂದು ದಿನದ ಭೇಟಿಗಾಗಿ ಹವಾ ನಿಯಂತ್ರಿತ ಹೊರಮನೆ ಮತ್ತು ಐಷಾರಾಮಿ ಟಾಯ್ಲೆಟ್ ನಿರ್ಮಿಸಲು 27.45 ಲಕ್ಷ ರೂ. ವೆಚ್ಚ ಮಾಡಿರುವುದು ತೀವ್ರ ವಿವಾದ ಸೃಷ್ಟಿಸಿದೆ.

ಥಾಯ್ಲೆಂಡ್ ರಾಜಕುಮಾರಿ ಮಹಾಚಕ್ರಿ ಸಿರಿಂಧೋರ್ನ್ ಕಾಂಬೋಡಿಯಾಕ್ಕೆ ಮೂರು ದಿನಗಳ ಭೇಟಿ ನೀಡಲಿದ್ದಾರೆ. ಅವರು ಮೊದಲ ದಿನ, ರತನಕ್ಕಿರಿ ಪ್ರಾಂತ್ಯದ ಸಂರಕ್ಷಿತ ಸರೋವರ ಯೀಕ್ ಲಾಹೋಮ್ ತಟದಲ್ಲಿ ಒಂದು ರಾತ್ರಿ ಕಳೆಯಲಿದ್ದಾರೆ.

ಇದಕ್ಕಾಗಿ ಸರೋವರದ ತಟದಲ್ಲಿ 8 ಚದರ ಮೀಟರ್ ವಿಸ್ತೀರ್ಣದಲ್ಲಿ ಐಷಾರಾಮಿ ಟಾಯ್ಲೆಟ್ ಹೊಂದಿರುವ ಹೊರಮನೆಯೊಂದನ್ನು ನಿರ್ಮಿಸಲಾಗಿದೆ. ಥಾಯ್ ಮೂಲದ ಎಸ್‌ಸಿಜಿ ನಿರ್ಮಾಣ ಕಂಪನಿ ಕೇವಲ 19 ದಿನಗಳಲ್ಲಿ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದೆ. ರಾಜಕುಮಾರಿ ಮಹಾಚಕ್ರಿ ಸಿರಿಂಧೋರ್ನ್ ಅವರ ಖಾಸಗಿ ಬಳಕೆಗೆಂದೇ ಐಷಾರಾಮಿ ಟಾಯ್ಲೆಟ್ ನಿರ್ಮಿಸಲಾಗಿದೆ.

ರಾಜಕುಮಾರಿ ನಿರ್ಗಮನದ ಬಳಿಕ ಈ ಐಷಾರಾಮಿ ಶೌಚಾಲಯವನ್ನು ಕೆಡವಲಾಗುತ್ತದಂತೆ. ವಿಶೇಷವೆಂದರೆ, ಮನೆ ನಿರ್ಮಾಣಕ್ಕೆ ಅಗತ್ಯವಾದ ಎಲ್ಲಾ ಕಚ್ಚಾವಸ್ತುಗಳನ್ನು ಬ್ಯಾಂಕಾಕ್‌ನಿಂದಲೇ ತರಿಸಲಾಗಿತ್ತಂತೆ. ರಾಜಕುಮಾರಿಗೆ ಶೌಚಾಲಯ ನಿರ್ಮಿಸಲು ಉತ್ತಮ ಗುಣಮಟ್ಟದ ಟಾಯ್ಲೆಟ್ ನಿರ್ಮಾಣಕ್ಕೆ ತಗುಲುವ ವೆಚ್ಚಕ್ಕಿಂತ 130 ಪಟ್ಟು ಹೆಚ್ಚಿನ ಹಣ ಖರ್ಚು ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

SCROLL FOR NEXT