ನವದೆಹಲಿ: ವಿಶ್ವವನ್ನೇ ಬೆದರಿಸುತ್ತಿರುವ ಇಸ್ಲಾಮಿಕ್ ಉಗ್ರ ಸಂಘಟನೆಗೂ ಹೆದರಿಕೆ ಕಾಡುತ್ತಿದೆಯಂತೆ! ಇಸ್ಲಾಮಿಕ್ ಸಂಘಟನೆಯ ಆಡಳಿತವನ್ನು ಹೇರಲು ಹೊರಟಿರುವ ಇಸೀಸ್ ಗೆ ಇಸ್ರೇಲ್ ನ್ನು ಕಂಡರೆ ಭಯ ಕಾಡುತ್ತಿದೆ.
ಕಳೆದ ವರ್ಷ ಇಸ್ಲಾಮಿಕ್ ಸ್ಟೇಟ್ ನಲ್ಲಿ 10 ದಿನಗಳಿದ್ದು ಪುಸ್ತಕ ಬರೆದಿರುವ ಪತ್ರಕರ್ತ ಜುರ್ಗನ್ ತಡೆನ್ ಹೋಫರ್ ಮಾಹಿತಿ ಪ್ರಕಾರ, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಮಧ್ಯಪ್ರಾಚ್ಯದಲ್ಲಿ ವಸಾಹತು ಸ್ಥಾಪಿಸಬೇಕಿರುವ ರಾಷ್ಟ್ರಗಳ ಮೊದಲ ಪಟ್ಟಿಯಿಂದ ಇಸ್ರೇಲ್ ನ್ನು ಕೈಬಿಟ್ಟಿದೆಯಂತೆ.
ಇಸ್ಲಾಮಿಕ್ ಉಗ್ರ ಸಂಘಟನೆ ಹೆದರುವ ಏಕೈಕ ರಾಷ್ಟ್ರವೆಂದರೆ ಅದು ಇಸ್ರೇಲ್. ಇಸ್ರೇಲ್ ನ ಉಗ್ರ ಸಂಘಟನೆ ಬಲಿಷ್ಠವಾಗಿದೆ ಎಂದು ಉಗ್ರರು ಅಭಿಪ್ರಾಯಪಟ್ಟಿರುವುದನ್ನು ಯಹೂದಿ ನ್ಯೂಸ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿರುವ ಜರ್ಮನ್ ಪತ್ರಕರ್ತ ಜುರ್ಗನ್ ತಡೆನ್ ಹೋಫರ್ ಹೇಳಿದ್ದಾರೆ.
ಇಸೀಸ್ ಉಗ್ರ ಸಂಘಟನೆಯ ಉಗ್ರರು ಅಮೆರಿಕ, ಬ್ರಿಟನ್ ನ್ನು ಎದುರಿಸುವುದು ಸುಲಭವೆಂದು ಭಾವಿಸಿದ್ದಾರೆ. ಆದರೆ ಇಸ್ರೇಲ್ ಸೇನೆಯನ್ನು ಕಂಡರೆ ಹೆದರುತ್ತಾರೆ, ಇಸ್ರೇಲ್ ಹಾಗೂ ಆಕ್ರಮಿತ ಪ್ಯಾಲೆಸ್ಟೈನ್ ನಲ್ಲಿ ಉಗ್ರರಿದ್ದರೂ ಇಸ್ರೇಲ್ ಮೇಲೆ ದಾಳಿ ಮಾಡುವ ಸಾಹಸ ಮಾಡುತ್ತಿಲ್ಲ ಎಂದು ಜುರ್ಗನ್ ತಡೆನ್ ಹೋಫರ್ ಹೇಳಿದ್ದಾರೆ.