ಸಂಗ್ರಹ ಚಿತ್ರ 
ವಿದೇಶ

ಸೌದಿ ಬಳಿಕ ಇರಾನ್ ಸಂಬಂಧಕ್ಕೆ ಕತ್ತರಿ ಹಾಕಿದ ಬಹರೇನ್, ಸುಡಾನ್

ಇರಾನ್ ನಲ್ಲಿರುವ ಸೌದಿ ರಾಯಭಾರ ಕಚೇರಿ ಮೇಲೆ ಉಗ್ರರು ನಡೆಸಿರುವ ಭೀಕರ ದಾಳಿಯನ್ನು ಖಂಡಿಸಿ ಸೌದಿ ಅರೇಬಿಯಾ ಇರಾನ್ ನೊಂದಿಗಿನ ವಾಣಿಜ್ಯಾತ್ಮಕ ಸಂಬಂಧವನ್ನು ಕಡಿದುಕೊಂಡಿದ್ದು, ಯುಎಇ...

ಸೌದಿ ಅರೇಬಿಯಾ: ಇರಾನ್ ನಲ್ಲಿರುವ ಸೌದಿ ರಾಯಭಾರ ಕಚೇರಿ ಮೇಲೆ ಉಗ್ರರು ನಡೆಸಿರುವ ಭೀಕರ ದಾಳಿಯನ್ನು ಖಂಡಿಸಿ ಸೌದಿ ಅರೇಬಿಯಾ ಇರಾನ್ ನೊಂದಿಗಿನ ವಾಣಿಜ್ಯಾತ್ಮಕ  ಸಂಬಂಧವನ್ನು ಕಡಿದುಕೊಂಡಿದ್ದು, ಯುಎಇ ಮಿತ್ರ ರಾಷ್ಟ್ರಗಳು ಕೂಡ ಸೌದಿಯ ನಿರ್ಧಾರವನ್ನೇ ಅನುಸರಿಸಿವೆ.

ಯುಎಇ ಮಿತ್ರ ರಾಷ್ಟ್ರಗಳಾದ ಬಹರೇನ್ ಮತ್ತು ಸುಡಾನ್ ದೇಶಗಳು ಇದೀಗ ಇರಾನ್ ನೊಂದಿಗೆ ಸಂಬಂಧ ಕಡಿತಕ್ಕೆ ಮುಂದಾಗಿವೆ. ರಾಯಭಾರ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ  ಬಳಿಕದ ಸನ್ನಿವೇಶಗಳನ್ನು ಗಮನಿಸಿದ್ದ ಸೌದಿ ಅರೇಬಿಯಾ ಉಗ್ರರ ವಿರುದ್ಧ ಇರಾನ್ ಸರ್ಕಾರ ಕೈಗೊಂಡಿದ್ದ ಕ್ರಮಗಳು ಮತ್ತು ನಡೆಯನ್ನು ಖಂಡಿಸಿತ್ತು. ಅಲ್ಲದೆ ಕಳೆದ ಭಾನುವಾರ ಸೌದಿ  ಅರೇಬಿಯಾ ಇರಾನ್ ನೊಂದಿಗಿನ ತನ್ನ ವಾಣಿಜ್ಯಾತ್ಮಕ ಸಂಬಂಧಕ್ಕೆ ತಿಲಾಂಜಲಿ ಹಾಕಿತ್ತು.

ಇದರ ಬೆನ್ನಲ್ಲೇ ಸೌದಿ ಮಿತ್ರ ರಾಷ್ಟ್ರಗಳಾದ ಸುಡಾನ್ ಮತ್ತು ಸಣ್ಣ ದ್ವೀಪ ರಾಷ್ಟ್ರ ಬಹರೇನ್ ಕೂಡ ಇಂದು ಇರಾನ್ ಮೇಲೆ ವಾಣಿಜ್ಯಾತ್ಮ ಸಂಬಂಧಕ್ಕೆ ನಿರ್ಬಂಧ ಹೇರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!