ನ್ಯೂಯಾರ್ಕ್: ಬಂದೂಕು ಹಿಂಸಾಚಾರದಲ್ಲಿ ಮೂರು ವರ್ಷಗಳ ಹಿಂದೆ ಸಾವನ್ನಪ್ಪಿದ್ದ ಮಕ್ಕಳ ನೆನೆದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಮಂಗಳವಾರ ಕಣ್ಣೀರು ಹಾಕಿದ್ದಾರೆ.
ಮೂರು ವರ್ಷಗಳ ಹಿಂದೆ ಅಮೆರಿಕದ ಕನೆಕ್ಟಿಕಟ್ ನ ನ್ಯೂಟೌನ್ ನಲ್ಲಿರುವ ಸ್ಯಾಂಡಿ ಹೂಕ್ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಂಡಿನ ದಾಳಿ ಸ್ಮರಣಾರ್ಥವಾಗಿ ನಡೆದ ಕಾರ್ಯಕ್ರಮವೊದರಲ್ಲಿ ಮಾತನಾಡಿರುವ ಅವರು, ಮಕ್ಕಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ದಾಳಿ ನೆನಪಾದಾಗ ಮಕ್ಕಳ ನೆನಪಾಗುತ್ತದೆ. ಆ ಬಗ್ಗೆ ಆಲೋಚನೆ ಬಂದಾಗ ಹುಚ್ಚು ಹಿಡಿಯುತ್ತದೆ. ಹಿಂಸಾಚಾರದಿಂದ ನಮ್ಮ ಜನರು ಸಾಯುತ್ತಿದ್ದಾರೆ. ಗನ್ ಲಾಬಿ ವಿರುದ್ಧ ಜನತೆ ಧ್ವನಿ ಎತ್ತಬೇಕಾಗಿದೆ. ಜನತೆ ಅಕ್ರಮ ಶಸ್ತ್ರಾಸ್ತ್ರ ಮಾರಾಟ, ಖರೀದಿಯನ್ನು ತಡೆಯುವ ಸಲುವಾಗಿ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ.