ಬೀಜಿಂಗ್: ಉತ್ತರ ಕೊರಿಯಾ ನಡೆಸಿದ ಇತ್ತೀಚಿನ ಅಣು ಬಾಂಬ್ ಪರೀಕ್ಷೆಯನ್ನು ಚೈನಾ ವಿರೋಧಿಸುತ್ತದೆ ಎಂದು ಚೈನಾದ ವಿದೇಶಾಂಗ ಸಚಿವಾಲಯ ಬುಧವಾರ ಹೇಳಿಕೆ ನೀಡಿದೆ.
ಉತ್ತರ ಕೊರಿಯಾ ಬುಧವಾರ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿರುವುದಾಗಿ ಬುಧವಾರ ಹೇಳಿದ ಮೇಲೆ ಚೈನಾ ವಿದೇಶಾಂಗ ಸಚಿವಾಲಯ ಈ ಹೇಳಿಕೆ ನೀಡಿದೆ.
"ಈಶಾನ್ಯ ಏಶಿಯಾದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಕೊರಿಯಾ ಪ್ರಸ್ಥಭೂಮಿ ಅಣು ಶಸ್ತ್ರಾಸ್ತ್ರ ಮುಕ್ತವಾಗಬೇಕು ಮತ್ತು ಅಣ್ವಸ್ತ್ರ ವಿರೋಧ ನೀತಿಯನ್ನು ಒಪ್ಪಿಕೊಳ್ಳಬೇಕು ಎಂಬ ಧೃಢ ನಿರ್ಧಾರಕ್ಕೆ ಚೈನಾ ಬದ್ಧವಿದೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಹ್ಯುಅ ಚುನ್ಯಿಂಗ್ ಹೇಳಿದ್ದಾರೆ.
ಪರಿಸ್ಥಿತಿ ಹದಗೆಡುವುದಕ್ಕೂ ಮುಂಚೆ ಅಣ್ವಸ್ತ್ರಗಳಿಂದ ಮುಕ್ತವಾಗುವುದಕ್ಕೆ ಉತ್ತರ ಕೊರಿಯಾ ಬದ್ಧವಾಗಬೇಕು ಎಂದು ಚೈನಾ ಆಗ್ರಹಿಸಿದೆ.