2016 ಚೀನಾದಲ್ಲಿ ಮಂಕಿ ಇಯರ್ (ಸಂಗ್ರಹ ಚಿತ್ರ) 
ವಿದೇಶ

ಈ ವರ್ಷ ಕಪಿಮುಷ್ಟಿಗೆ ಸಿಲುಕಲಿದೆ ಚೀನಾ

ಚೀನಾ ಈ ವರ್ಷ ಕಪಿಮುಷ್ಟಿಗೆ ಸಿಲುಕಲಿದೆ. ಹೌದು, ೨೦೧೬ರ ಈ ವರ್ಷಕ್ಕೆ ಅಲ್ಲಿನ ಸೌರಮನ ಪಂಚಾಂಗದ ಪ್ರಕಾರ ಕೋತಿಯೇ ಅಧಿಪತಿ...

ಬೀಜಿಂಗ್: ಚೀನಾ ಈ ವರ್ಷ ಕಪಿಮುಷ್ಟಿಗೆ ಸಿಲುಕಲಿದೆ. ಹೌದು, ೨೦೧೬ರ ಈ ವರ್ಷಕ್ಕೆ ಅಲ್ಲಿನ ಸೌರಮನ ಪಂಚಾಂಗದ ಪ್ರಕಾರ ಕೋತಿಯೇ ಅಧಿಪತಿ.

ಹೀಗಾಗಿ ಚೀನಾ ಈ ವರ್ಷ ಕೋತಿಮಯವಾಗಲಿದೆ. ಈ ರಾಶಿಯಲ್ಲಿ ನಡೆಯುತ್ತಿರುವ ಈ ವರ್ಷ ಅತ್ಯಂತ ಶುಭದಾಯಕ ಎಂದೇ ಅಲ್ಲಿ ನಂಬಲಾಗಿದೆ. ಈ ವರ್ಷ ಜನಿಸಿದ ಮಕ್ಕಳು ಬುದ್ಧಿಶಾಲಿಗಳೆಂದೂ ಅವರು ನಂಬಿದ್ದಾರೆ. ಇದೆಲ್ಲದರ ನಡುವೆ ಕೋತಿಯ ಚಿತ್ರವುಳ್ಳ ವಸ್ತುಗಳಿಗೆ ಅಲ್ಲಿ ಸಖತ್ ಡಿಮಂಡ್ ಸೃಷ್ಟಿಯಗಿದೆ. ಭಾರತೀಯ ಸಂಪ್ರದಾಯದಲ್ಲಿ ೧೨  ರಾಶಿಗಳಿರುವಂತೆ, ಚೀನಾದಲ  ೧೨ ರಾಶಿಗಳ ನಂಬಿಕೆ ಇದೆ. ಈ ರಾಶಿಗಳೆಲ್ಲವೂ ಒಂದೊಂದು ಪ್ರಾಣಿಗಳಿಗೆ ಸಂಬಂಧಿಸಿವೆ. ಹುಲಿ, ಇಲಿ, ಕುರಿ, ಕೋತಿ, ಹಂದಿ ಹೀಗೆ ಒಂದೊಂದು  ರಾಶಿಗೆ ಒಂದೊಂದು ಪ್ರಾಣಿಗಳು ಅಧಿಪತಿಗಳಾಗಿವೆ.

ಅದರಂತೆ, ೨೦೧೬ನೇ ವರ್ಷ ಕೋತಿ ರಾಶಿಗೆ ಸಂಬಂಧಿಸಿದ್ದಾಗಿದ್ದು, ೨೦೧೫ರ ಕುರಿ ರಾಶಿಗೆ ಫೆಬ್ರವರಿಯಲ್ಲಿ ವಿದಾಯ ಹೇಳಲಾಗುತ್ತದೆ. ಚೀನಾದ ಹೊಸ ವರ್ಷ ಫೆಬ್ರವರಿ ೮ಕ್ಕೆ ಆರಂಭವಾಗಲಿದೆ. ಅಂದು ಅಲ್ಲಿ ವಸಂತೋತ್ಸವ. ಈ ಹಬ್ಬದಂದು, ಕೋತಿ ವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ. ಈ ವರ್ಷದಲ್ಲಿ ಜನಿಸಿದ ಮಕ್ಕಳ ಬುದ್ಧಿ ಹೆಚ್ಚು ಸ್ಮಾರ್ಟ್ ಆಗಿರಲಿದೆ. ಚಾಣಾಕ್ಷರು, ಕ್ರಿಯಾಶೀಲರು, ಲವಲವಿಕೆಯುಳ್ಳವರೂ ಆಗಿರುತ್ತಾರೆ ಎಂದು ಅಲ್ಲಿ ನಂಬಲಾಗಿದೆ. ಆದರಂತೆ, ಈ ಹಿಂದಿನ ಕುರಿ ವರ್ಷದಲ್ಲಿ ಜನಿಸಿದ ಮಕ್ಕಳಿಗೆ ಅದೃಷ್ಟ ಕಡಿಮೆಯಂತೆ.  ಸ್ಪ್ರಿಂಗ್ ಫೆಸ್ಟಿವಲ್‌ಗಾಗಿ ಇಡೀ ಚೀನಾ ಸಜ್ಜಾಗುತ್ತಿದೆ. ಮನೆ, ಕಚೇರಿ, ಕಾರು, ಅಂಗಡಿ ಮುಂಗಟ್ಟುಗಳು ಸಿಂಗಾರಗೊಂಡಿವೆ. ಹನ್ನೆರಡು ರಾಶಿಗಳ ಚಿತ್ರಗಳುಳ್ಳ ಚಿತ್ರಪಟಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ.

ಮಾರುತಿ ಮಹಿಮೆ
ಜನ ಬಳಕೆಯ ವಸ್ತುಗಳ ಮೇಲೆಲ್ಲ ಕೋತಿಗಳ  ಚಿತ್ರಗಳನ್ನ ಅಂಟಿಸಿ ವರ್ತಕರು ಮಾರಾಟ ಆರಂಭಿಸಿದ್ದಾರೆ. ಇನ್ನು ಕೋತಿಯ ಬೊಂಬೆಗಳಿಗಂತೂ ಎಲ್ಲಿಲ್ಲದ ಬೇಡಿಕೆ. ವೆಬ್  ಶಾಪಿಂಗ್‌ನಲ್ಲೂ ಕೋತಿ ಕುಣಿತವೇ ಕಾಣಿಸುತ್ತಿದೆ. ಕೈಗಡಿಯರ, ಚಾಕೊಲೆಟ್, ಬ್ರೇಸ್‌ಲೆಟ್‌ಗಳಲ್ಲಿಯೂ ಕೋತಿ ಚಿತ್ರವೇ ಕಾಣಿಸುತ್ತಿದೆ. ಹೀಗಿರುವಾಗಲೇ ಖ್ಯಾತ ಚೀನಿ ನಟ ಲೂಯಿಸ್ ಕೂ  ಅವರ ‘ ಮಂಕಿ ಕಿಂಗ್ ೨’ ಕೂಡ ಈ ವರ್ಷವೇ ಬಿಡುಗಡೆಯಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!