ಸಾಂದರ್ಭಿಕ ಚಿತ್ರ 
ವಿದೇಶ

ಮುಸ್ಲಿಂ ಮಹಿಳೆಯರು ಇಂಗ್ಲಿಷ್ ಕಲಿಬೇಕು, ಇಲ್ಲದಿದ್ದರೆ ಗಡಿಪಾರು: ಬ್ರಿಟಿಷ್ ಪ್ರಧಾನಿ

ಗುಣಮಟ್ಟದ ಇಂಗ್ಲಿಷ್ ಕಲಿಯುವಲ್ಲಿ ವಿಫಲವಾಗುವ ಮುಸ್ಲಿಂ ಮಹಿಳೆಯರನ್ನು ದೇಶದಿಂದ ಗಡಿಪಾರು ಮಾಡಲಾಗುವುದು ಎಂದು ಬ್ರಿಟಿನ್ ಪ್ರಧಾನಿ ಡೇವಿಡ್ ಕ್ಯಾಮರೂನ್...

ಲಂಡನ್: ಗುಣಮಟ್ಟದ ಇಂಗ್ಲಿಷ್ ಕಲಿಯುವಲ್ಲಿ ವಿಫಲವಾಗುವ ಮುಸ್ಲಿಂ ಮಹಿಳೆಯರನ್ನು ದೇಶದಿಂದ ಗಡಿಪಾರು ಮಾಡಲಾಗುವುದು ಎಂದು ಬ್ರಿಟಿನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಸೋಮವಾರ ಹೇಳಿದ್ದಾರೆ.
ಕಳಪೆ ಇಂಗ್ಲಿಷ್ ಸ್ಕಿಲ್ ಹೊಂದಿರುವವರಿಂದ ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ತಪ್ಪು ಸಂದೇಶ ರವಾನೆಯಾಗಬಹುದು ಎಂದು ಸಹ ಬ್ರಿಟಿಷ್ ಪ್ರಧಾನಿ ಎಚ್ಚರಿಸಿದ್ದಾರೆ.
ಬ್ರಿಟನ್‌ಗೆ ಬಂದು ತಮ್ಮ ಪತಿಯೊಂದಿಗೆ ವಾಸಿಸುವ ಮುನ್ನ ಇಂಗ್ಲಿಷ್ ಕಲಿಯಬೇಕು ಎಂದು ವಲಸೆ ಕಾನೂನಿದೆ. ಆದರೆ ಕಲಿಯದವರಿಗೆ ಮತ್ತೆ ಎರಡೂವರೆ ವರ್ಷಗಳ ನಂತರ ಅವರ ಇಂಗ್ಲಿಷ್ ಭಾಷಾ ಗುಣಮಟ್ಟ ಸುಧಾರಿಸಿದೆಯೇ ಅಥವಾ ಇಲ್ಲಾ ಎಂಬುದರ ಬಗ್ಗೆ ಪರೀಕ್ಷೆ ನಡೆಸಲಾಗುವುದು ಎಂದರು.
'ಒಂದು ವೇಳೆ ಇಂಗ್ಲಿಷ್ ಗುಣಮಟ್ಟ ಸುಧಾರಿಸಿಕೊಳ್ಳದಿದ್ದರೆ ನೀವು ಇಲ್ಲಿ ವಾಸಿಸಲು ಸಾಧ್ಯವಿಲ್ಲ' ಎಂದು ಕ್ಯಾಮರೂನ್ ಅವರು ಬಿಬಿಸಿ ರೇಡಿಯೊಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ 'ಇದು ನಮ್ಮ ದೇಶಕ್ಕೆ ಬರುವ ಜನರ ಜವಾಬ್ದಾರಿಯೂ ಹೌದು' ಎಂದಿದ್ದಾರೆ.
ಸುಮಾರು 1 ಲಕ್ಷ 90 ಸಾವಿರ ಮುಸ್ಲಿಂ ಮಹಿಳೆಯರು ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಕ್ಯಾಮರೂನ್ ಸರ್ಕಾರ ಅಂದಾಜು ಮಾಡಿದ್ದು, ಈ ಪೈಕಿ ಶೇ.20ರಷ್ಟು ಮಹಿಳೆಯರಿಗೆ ಇಂಗ್ಲಿಷ್ ಅಲ್ಪ ಸ್ವಲ್ಪ ಅಥವಾ ಬರೋದೆ ಇಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

'ಟಾಕ್ಸಿಕ್' ಸಿನಿಮಾ ವಿರುದ್ಧ ಸುಳ್ಳು ಮಾಹಿತಿ ಪ್ರಕಟಿಸದಂತೆ ಕೋರ್ಟ್ ತಡೆಯಾಜ್ಞೆ!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!