ಲಂಡನ್: ಪೈಶಾಶಿಕ ಕೃತ್ಯಗಳ ಮೂಲಕ ಜಗತ್ತನ್ನೇ ತಲ್ಲಣಗೊಳಿಸಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಇದೀಗ ಇರಾಕ್, ಅಮೆರಿಕ ವಾಯುದಾಳಿಗೆ ತತ್ತರಿಸಿದ್ದು, ಸಂಘಟನೆಯ ಉಗ್ರನೊಬ್ಬ ಜೀವಭಯದಿಂದ ತಪ್ಪಿಸಿಕೊಳ್ಳುತ್ತಿರುವ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಂಧೂಕುದಾರಿ ಉಗ್ರನೊಬ್ಬ ಇರಾಕ್ ಪಡೆಗಳ ಕ್ಯಾಪ್ಟರ್ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ. ಈ ವೇಳೆ ತಲೆ ಮೇಲೆ ಹುಲ್ಲನ್ನು ಇಟ್ಟು ಬಯಲಿನಲ್ಲಿ ಮಲಗಿ ಜೀವ ಉಳಿಸಿಕೊಳ್ಳಲು ಯತ್ನಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಇನ್ನು ಹೆಲಿಕ್ಯಾಪ್ಟರ್ ಹಾದು ಮುಂದೆ ಹೋಗುತ್ತಿದ್ದಂತೆ ಉಗ್ರ ಮತ್ತೆ ರೈಫಲ್ ಕೈಗೆತ್ತಿಕೊಳ್ಳುತ್ತಾನೆ. ಅಮಾಯಕ ಜೀವ ತೆಗೆಯಲು ಇಂದು ಮುಂದೆ ನೋಡದ ಈ ಉಗ್ರರು ತಮ್ಮ ಜೀವಕ್ಕೆ ಕುತ್ತು ಬರುತ್ತದೆ ಎಂದಾಕ್ಷಣ ಜೀವ ಭಯ ಆವರಿಸುತ್ತದೆ.