ದಕ್ಷಿಣ ಚೀನಾ ಸಮುದ್ರ 
ವಿದೇಶ

ಅಮೆರಿಕ, ಜಪಾನ್ ದೇಶಗಳು ಕೇವಲ ಕಾಗದದ ಹುಲಿಗಳಷ್ಟೆ: ಚೀನಾ ಮಾಧ್ಯಮ

ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಮತ್ತು ತಂತ್ರಜ್ಞಾನದಲ್ಲಿ ಪ್ರಸಿದ್ಧಿ ಪಡೆದಿರುವ ಜಪಾನ್ ದೇಶಗಳು ನಪುಂಸಕ ದೇಶಗಳಾಗಿದ್ದು, ಕೇವಲ ಕಾಗದದ ಹುಲಿಗಳಾಗಿವೆ...

ಬೀಜಿಂಗ್: ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಮತ್ತು ತಂತ್ರಜ್ಞಾನದಲ್ಲಿ ಪ್ರಸಿದ್ಧಿ ಪಡೆದಿರುವ ಜಪಾನ್ ದೇಶಗಳು ನಪುಂಸಕ ದೇಶಗಳಾಗಿದ್ದು, ಕೇವಲ ಕಾಗದದ ಹುಲಿಗಳಾಗಿವೆ ಎಂದು ಚೀನಾ ಮಾಧ್ಯಮವೊಂದು ಗುರುವಾರ ವರದಿ ಮಾಡಿದೆ.

ದಕ್ಷಿಣ ಚೀನಾ ಸಮುದ್ರದ ವಿವಾದಕ್ಕೆ ಸಂಬಂಧಿಸಿದಂತೆ ಗ್ಲೋಬರ್ ಟೈಮ್ಸ್ ಪತ್ರಿಕೆ ಸಂಪಾದಕೀಯವೊಂದನ್ನು ಬರೆದಿದ್ದು, ಸಂಪಾದಕೀಯದಲ್ಲಿ ಅಮೆರಿಕ ಹಾಗೂ ಜಪಾನ್ ದೇಶಗಳನ್ನು ನಂಪುಸಕ, ಕಾಗದದ ಹುಲಿಗಳಷ್ಟೇ ಎಂದು ಹೀಯಾಳಿಸಿದೆ.

ದಕ್ಷಿಣ ಚೀನಾ ಸಮುದ್ರದ ಮೇಲಿನ ಚೀನಾ ಹಿಡಿತವನ್ನು ಫಿಲಿಪ್ಟೀನ್ಸ್, ಮಲೇಷ್ಯಾ, ತೈವಾನ್, ಬ್ರೂನೆ ಹಾಗೂ ವಿಯೆಟ್ನಾಂ ದೇಶಗಳು ವಿರೋಧಿಸುತ್ತಲೇ ಬಂದಿತ್ತು. ಈ ವಿರೋಧಕ್ಕೆ ಅಮೆರಿಕ ಹಾಗೂ ಜಪಾನ್ ರಾಷ್ಟ್ರಗಳೂ ಕೂಡ ಬೆಂಬಲ ಸೂಚಿಸಿತ್ತು.

ವಿವಾದದಲ್ಲಿ ಅಮೆರಿಕ ಹಾಗೂ ಜಪಾನ್ ರಾಷ್ಟ್ರಗಳು ಬೆಂಬಲ ಸೂಚಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಚೀನಾ ಮಾಧ್ಯಮ, ಸಮುದ್ರ ವಿವಾದಲ್ಲಿ ಇತರೆ ದೇಶಗಳು ಪ್ರಭುತ್ವ ಸಾಧಿಸುವುದನ್ನು ಚೀನಾ ಖಂಡಿಸುತ್ತದೆ ಎಂದು ಹೇಳಿದೆ.

ಅಲ್ಲದೆ, ವಿಶ್ವಸಂಸ್ಥೆ ಪೋಷಿತ ನ್ಯಾಯಾಧೀಕರಣದ ತೀರ್ಪು ಜಾರಿಗೆ ತರುವ ನಿಟ್ಟಿನಲ್ಲಿ ಅಮೆರಿಕದ ಯುದ್ಧ ನೌಕೆಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಸಮರಾಭ್ಯಾಸ ನಡೆಸಲು ಬಂದಿದ್ದೇ ಆದರೆ, ಚೀನಾ ಪಡೆ ಪ್ರತಿ ದಾಳಿ ನಡೆಸುವ ಮೂಲಕ ತಕ್ಕ ಪಾಠ ಕಲಿಸುತ್ತದೆ. ಅಮೆರಿಕಾಗೆ ಕೌಂಟರ್ ಅಟಾಕ್ ಮಾಡಲು ಚೀನಾ ಸದಾ ಕಾಲ ಸನ್ನದ್ಧವಾಗಿರಬೇಕಿದೆ ಎಂದು ಹೇಳಿಕೊಂಡಿದೆ.

ಪತ್ರಿಕೆ ಈ ಸಂಪಾದಕೀಯ ಕುರಿತಂತೆ ಪ್ರತಿಕ್ರಯೆ ನೀಡಿರುವ ಚೀನೀ ಹಿರಿಯ ನಾಯಕರೊಬ್ಬರು, ಕಾಗದದ ಹುಲಿಗಳು ಎಂಬ ಪದ ಬಳಕೆಯಿಂದ ಚಿಂತೆ ಮಾಡುವ ಅಗತ್ಯವಿಲ್ಲ. ಆದರೆ, ನಪುಂಸಕ ಪದ ಬಳಕೆ ಮಾಡಿರುವುದು ಪರಿಣಾಮ ಬೀರುವ ಸಾಧ್ಯತೆಗಳಿವೆ. ಆಟವಾಡುವವರಿಗಿಂತ ಹೊರಗಿನವರು ಹೆಚ್ಚು ಜಾಗೃತರಾಗಿತ್ತಾರೆ. ವಾಷಿಂಗ್ಟನ್ ಮತ್ತು ಟೋಕಿಯೋ ನಪುಂಸಕ ಪದವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇ ಆದರೆ, ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

2nd Test: ವಿಂಡೀಸ್ ವಿರುದ್ಧ ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್, ವಿಶ್ವ ದಾಖಲೆ

SCROLL FOR NEXT