ವಿದೇಶ

ಫ್ಲೊರಿಡಾ ನೈಟ್ ​ಕ್ಲಬ್ ​ನಲ್ಲಿ ಗುಂಡಿನ ದಾಳಿ: 2 ಸಾವು, 14 ಮಂದಿಗೆ ಗಾಯ

Lingaraj Badiger
ವಾಷಿಂಗ್ಟನ್: ಅಮೆರಿಕಾದ ಪ್ಲೊರಿಡಾದ ನೈಟ್​ ಕ್ಲಬ್ ವೊಂದರಲ್ಲಿ ದುಷ್ಕರ್ಮಿಗಳು ಸೋಮವಾರ ಬೆಳಗಿನ ಜಾವ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಟ ಇಬ್ಬರು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ.
ಫೋರ್ಟ್ ಮೇಯರ್ ನೈಟ್ ​ಕ್ಲಬ್ ನಲ್ಲಿ ಗುಂಡಿನ ದಾಳಿ ನಡೆದಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಹದಿಹರೆಯದವರು ಪಾರ್ಟಿ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.
ಬಂದೂಕುಧಾರಿ ಏಕಾಏಕಿ ಕ್ಲಬ್ ಬಳಿ ಬಂದು ಬಹಿರಂಗವಾಗಿಯೇ ಗುಂಡಿನ ದಾಳಿ ನಡೆಸಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಿದ್ದು, ಮತ್ತಿಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನ ನಿಲುಗಡೆ ಸ್ಥಳದಲ್ಲಿ ಸ್ಥಳೀಯ ಕಾಲಮಾನ 12.30 AM (EST) ಕ್ಕೆ ಗುಂಡಿನ ದಾಳಿ ಕೇಳಿ ಬಂದಿದ್ದು, ಗಾಯಗೊಂಡವರ ಪೈಕಿ ಕೆಲವ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
SCROLL FOR NEXT