ಜೂಲಿಯಾನ ಲೋಪೆಜ್‌ ಸರಝೋಲಾ 
ವಿದೇಶ

ವಿಶ್ವ ಸುಂದರಿ ಕನಸು ಹೊತ್ತು ಬಂದು 15 ವರ್ಷ ಜೈಲು ಶಿಕ್ಷೆಗೆ ಗುರಿಯಾದ ರೂಪದರ್ಶಿ!

ವಿಶ್ವ ಸುಂದರಿ ಸ್ಫರ್ಧೆಯಲ್ಲಿ ಭಾಗವಹಿಸಲು ಚೀನಾಗೆ ಹೋಗಿದ್ದ ಕೊಲಂಬಿಯಾದ ರೂಪದರ್ಶಿ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ...

ಬೀಜಿಂಗ್: ವಿಶ್ವ ಸುಂದರಿ ಸ್ಫರ್ಧೆಯಲ್ಲಿ ಭಾಗವಹಿಸಲು ಚೀನಾಗೆ ಹೋಗಿದ್ದ ಕೊಲಂಬಿಯಾದ ರೂಪದರ್ಶಿ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ.

22 ವರ್ಷದ ಜೂಲಿಯಾನ ಲೋಪೆಜ್‌ ಸರಝೋಲಾ ಚೀನಾದಲ್ಲಿ ನಡೆಯಲಿದ್ದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಳು. ಇದೇ ವೇಳೆ ಡ್ರಗ್ಸ್‌ ಸಾಗಿಸಿದ ಅರೋಪಕ್ಕೆ ಒಳಗಾದ ಆಕೆಯ ಅಪರಾಧ ಸಾಬೀತಾಗಿದ್ದು  ಚೀನಾ ನ್ಯಾಯಾಲಯದಿಂದ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ.

ಕೊಲಂಬಿಯಾದ ಮಿಸ್ ಅಂಟಿಕೋಯಾ ಸೌಂದರ್ಯ ಸ್ಪರ್ಧೆಯ  ವಿಜೇತೆಯಾಗಿದ್ದ ಸರಝೋವಾ,  ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸುವ ಕನಸಿನೊಂದಿಗೆ ಕಳೆದ ವರ್ಷ ಜುಲೈ 18 ರಂದು ಚೀನಾಕ್ಕೆ ಬಂದಿದ್ದಳು. ಲ್ಯಾಪ್‌ಟಾಪ್‌ನಲ್ಲಿ 610 ಗ್ರಾಂ ಕೊಕೇನ್‌ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಆಕೆ ಗುವಾಂಗ್ಝೌ ಬೈಯೂನ್‌  ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಳು. ಜೀವಾವಧಿ ಶಿಕ್ಷೆಯ ಭಯದಿಂದ ನಾಪತ್ತೆಯಾಗಿದ್ದ ಸರಝೋವಾಳನ್ನು ಪತ್ತೆ ಮಾಡಲಾಗಿತ್ತು.

ಸ್ಪರ್ಧೆಯಲ್ಲಿ ಭಾಗವಹಿಸಲು ಬಂದ ನನಗೆ ಇಲ್ಲಿನ ಖರ್ಚುವೆಚ್ಚ ತೂಗಿಸಲು ಹಣ ಬೇಕಾಗಿತ್ತು. ಹೀಗಾಗಿ ಡ್ರಗ್ಸ್ ಕಳ್ಳ ಸಾಗಣೆದಾರನ ಜೊತೆ ಸೇರಿ ತಪ್ಪು ಮಾಡಿದೆ ಎಂದು ಆಕೆ ತನ್ನ ತಪ್ಪನ್ನು ಒಪ್ಪಿ ಕೊಂಡಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!