ಟೆಕ್ಸಾಸ್ ನಲ್ಲಿ ಭೀಕರ ಬಲೂನ್ ದುರಂತ; 16 ಸಾವು, ಕ್ಷಿಪ್ರಗತಿಯಲ್ಲಿ ಸಾಗಿದ ರಕ್ಷಣಾ ಕಾರ್ಯ
ಹಾಟ್ ಏರ್ ಬಲೂನ್ ಪತನವಾಗಿ ಅದರಲ್ಲಿದ್ದ ಎಲ್ಲ 16 ಮಂದಿ ಸಾವನ್ನಪ್ಪಿರುವ ಭೀಕರ ದುರಂತ ಅಮೆರಿಕದ ಟೆಕ್ಸಾಸ್ ನಲ್ಲಿ ಸಂಭವಿಸಿದೆ.
ಟೆಕ್ಸಾಸ್: ಹಾಟ್ ಏರ್ ಬಲೂನ್ ಪತನವಾಗಿ ಅದರಲ್ಲಿದ್ದ ಎಲ್ಲ 16 ಮಂದಿ ಸಾವನ್ನಪ್ಪಿರುವ ಭೀಕರ ದುರಂತ ಅಮೆರಿಕದ ಟೆಕ್ಸಾಸ್ ನಲ್ಲಿ ಸಂಭವಿಸಿದೆ.
ತನಿಖಾಧಿಕಾರಿಗಳು ಮಾಹಿತಿ ನೀಡಿರುವಂತೆ ದಕ್ಷಿಣ ಆಸ್ಟಿನ್ ನಗರದಿಂದ ಸುಮಾರು 30 ಮೈಲಿ ದೂರದಲ್ಲಿರುವ ಲಾಕ್ಹಾರ್ಟ್ ಪ್ರದೇಶದ ಸಮೀಪದಲ್ಲಿ ಬಲೂನು ಪತನವಾಗಿದ್ದು, ಬಲೂನಿನಲ್ಲಿ ಸುಮಾರು 16 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಬಲೂನಿನಲ್ಲಿದ್ದ ಎಲ್ಲ 16 ಪ್ರಯಾಣಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ದುರಂತ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ.
ಇನ್ನು ಬಲೂನು ಪತನಕ್ಕೆ ಮೇಲ್ನೋಟಕ್ಕೆ ಬೆಂಕಿ ಕಾರಣ ಎಂದು ಹೇಳಲಾಗುತ್ತಿದ್ದು, ಬಲೂನಿನಲ್ಲಿದ್ದ ಬೆಂಕಿ ಉಪಕರಣದಿಂದ ಇಡೀ ವಾಹನಕ್ಕೆ ಬೆಂಕಿ ತಗುಲಿ ಕೂಡಲೇ ಬಲೂನು ಭೂಮಿಗೆ ಅಪ್ಪಳಿಸಿದೆ. ಸ್ಥಳೀಯರು ನೀಡಿರುವ ಮಾಹಿತಿಯಂತೆ ಬಲೂನು ಗಾಳಿಯಲ್ಲಿರುವಾಗಲೇ ಬೆಂಕಿ ತಗುಲಿದ್ದು, ಬಲೂನ್ ಬೆಂಕಿಯುಂಡೆಯಂತಾಗಿ ನೆಲಕ್ಕೆ ಬಿತ್ತು. ಆರಂಭದಲ್ಲಿ ಎಲ್ಲರೂ ಅದನ್ನು ಯಾವುದೋ ಆಕಾಶಕಾಯ ಎಂದು ಭಾವಿಸಿದ್ದರು. ಆದರೆ ಭೂಮಿಗೆ ಬಿದ್ದ ಬಳಿಕವಷ್ಟೇ ಅದು ಪ್ರಯಾಣಿಕ ಬಲೂನು ಎಂದು ತಿಳಿದು ಬಂತು ಎಂದು ಹೇಳಿದ್ದಾರೆ.
ಅಮೆರಿಕ ಇತಿಹಾಸದಲ್ಲಿಯೇ ಟೆಕ್ಸಾಸ್ ನಲ್ಲಿ ನಡೆದ ಬಲೂನ್ ದುರಂತ ಅತೀ ದೊಡ್ಡ ಪ್ರಮಾಣದ ಬಲೂನು ದುರಂತ ಎಂದು ಹೇಳಲಾಗುತ್ತಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.