ಜೀನತ್ 
ವಿದೇಶ

ಪ್ರೇಮಿಸಿ ವಿವಾಹವಾದ ಮಗಳನ್ನೇ ಜೀವಂತವಾಗಿ ಸುಟ್ಟ ತಾಯಿ!

ಪ್ರೀತಿಸಿ ವಿವಾಹವಾದ ಮಗಳನ್ನು ತಾಯಿ ಮತ್ತ ಸಹೋದರ ಜೀವಂತವಾಗಿ ಸುಟ್ಟ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ....

ಇಸ್ಲಮಾಬಾದ್ : ಪ್ರೀತಿಸಿ ವಿವಾಹವಾದ ಮಗಳನ್ನು ತಾಯಿ ಮತ್ತ ಸಹೋದರ ಜೀವಂತವಾಗಿ ಸುಟ್ಟ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಮರ್ಯಾದೆ ಗೇಡು ಹತ್ಯಾ ಪ್ರಕರಣ ಇದಾಗಿದೆ.

18 ವರ್ಷದ ಜೀನತ್‌  ಸಾವನ್ನಪ್ಪಿದ ಯುವತಿ, ಪ್ರಕರಣ ಸಂಬಂಧ ಜೀನತ್‌ ಅವರ ತಾಯಿಯನ್ನು ಬಂಧಿಸಲಾಗಿದೆ. ಅವರ ಸಹೋದರನಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ಲಾಹೋರ್‌ ಪೊಲೀಸ್‌ರು ತಿಳಿಸಿದ್ದಾರೆ.

ಯುವಕನೊಂದಿಗೆ ಓಡಿ ಹೋಗಿ ಮದುವೆಯಾಗುವ ಮೂಲಕ ಆಕೆ ಕ್ಷಮಿಸಲಾರದ ತಪ್ಪು ಮಾಡಿದ್ದಾಳೆ ಎಂದು ಬಂಧನದಲ್ಲಿರುವ ಜೀನತ್‌ ತಾಯಿ  ಪರ್ವೀನ್‌ ಹೇಳಿದ್ದಾರೆ. ಇದೇ ವೇಳೆ ತಪ್ಪೊಪ್ಪಿಕೊಂಡಿರುವ ಅವರು, ಮಗ ಈ ಹತ್ಯೆಯಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಜೀನತ್‌ ಅದೇ ಊರಿನ ಹಸನ್‌ ಎಂಬುವನನ್ನು ಪ್ರೀತಿಸುತ್ತಿದ್ದಳು. ಮದುವೆಯಾಗಲು ಒಪ್ಪಿಗೆ ನೀಡುವಂತೆ ಇಬ್ಬರೂ ಹೆತ್ತವರ ಬಳಿ ಕೇಳಿಕೊಂಡಿದ್ದರು. ಆದರೆ ಅವರು ಅದಕ್ಕೆ ಸಮ್ಮತಿಸದ ಕಾರಣ ಹಸನ್‌ ಹಾಗೂ ಜೀನತ್‌ ಓಡಿ ಹೋಗಿ ಮದುವೆಯಾಗಿದ್ದರು.

ಕೆಲ ದಿನಗಳ ಹಿಂದೆ ತಾಯಿಯನ್ನು ಸಂಪರ್ಕಿಸಿದ್ದ ಜೀನತ್‌, ಕುಟುಂಬದ ಸದಸ್ಯರ ಒಪ್ಪಿಗೆಯಿಲ್ಲದೇ ಮದುವೆಯಾಗಿದ್ದಕ್ಕೆ ಕ್ಷಮಿಸುವಂತೆ ಕೇಳಿಕೊಂಡಿದ್ದರು. ಆಗ ಪರ್ವೀನ್‌ ಕ್ಷಮಿಸುವುದಾಗಿ ಹೇಳಿ, ಮನೆಗೆ ಬಂದು ಕುಟುಂಬ ಸದಸ್ಯರ ಆಶೀರ್ವಾದ ಪಡೆದುಕೊಳ್ಳುವಂತೆ ತಿಳಿಸಿದ್ದರು. ಜೀನತ್‌ ಅವರು ಬುಧವಾರ ತಾಯಿ ಮನೆಗೆ ಬಂದಿದ್ದರು. ಆಗ ತಾಯಿ ಹಾಗೂ ಅಣ್ಣ ಮೊದಲು ಹಿಂಸೆ ನೀಡಿ, ಬಳಿಕ ಡೀಸೆಲ್‌ ಸುರಿದು ಜೀವಂತವಾಗಿ ಸುಟ್ಟಿದ್ದಾರೆ ಎಂದು ಹೈದರ್‌ ಹೇಳಿದ್ದಾರೆ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT