ಸಲಿಂಗಿ ನೈಟ್ ಕ್ಲಬ್ ಮೇಲೆ ದಾಳಿ (ಸಂಗ್ರಹ ಚಿತ್ರ) 
ವಿದೇಶ

ಸಲಿಂಗಿಗಳು ಪರಸ್ಪರ ಮುತ್ತಿಟ್ಟುಕೊಂಡಿದ್ದೇ ದಾಳಿಗೆ ಕಾರಣವಾಯ್ತೇ?

ಬರೊಬ್ಬರಿ 50 ಜನರ ಸಾವಿಗೆ ಕಾರಣವಾದ ಮತ್ತು 53ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡ ಅಮೆರಿಕದ ನೈಟ್ ಕ್ಲಬ್ ದಾಳಿ ನಡೆಸಿದ್ದು ನಾವೇ ಎಂದು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೇಳಿಕೊಂಡಿದೆ...

ಫ್ಲೋರಿಡಾ: ಬರೊಬ್ಬರಿ 50 ಜನರ ಸಾವಿಗೆ ಕಾರಣವಾದ ಮತ್ತು 53ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡ ಅಮೆರಿಕದ ನೈಟ್ ಕ್ಲಬ್ ದಾಳಿ ನಡೆಸಿದ್ದು ನಾವೇ ಎಂದು ಇಸ್ಲಾಮಿಕ್ ಸ್ಟೇಟ್  ಉಗ್ರ ಸಂಘಟನೆ ಹೇಳಿಕೊಂಡಿದೆ.

ದಾಳಿ ನಡೆಸಿದ ಉಗ್ರ ನಮ್ಮ ಉಗ್ರ ಸಂಘಟನೆಯ ಯೋಧನಾಗಿದ್ದಾನೆ ಎಂದು ಉಗ್ರ ಸಂಘಟನೆ ಮುಖವಾಣಿ ಅಮಾಖ್ ನಲ್ಲಿ ತಿಳಿಸಲಾಗಿದೆ ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.

ಹಂತಕನ ಗುರುತು ಪತ್ತೆ
ಗುಂಡಿನ ದಾಳಿ ನಡೆಸಿದ ಹಂತಕ ಫ್ಲೋರಿಡಾದ ಪೋರ್ಟ್ ಸೇಂಟ್ ಲೂಸಿ ನಿವಾಸಿ ಒಮರ್ ಮಾಟಿನ್ ಎಂದು ಗುರುತಿಸಲಾಗಿದ್ದು, ಈತನ ಪಾಲಕರು ಆಫ್ಘಾನಿಸ್ತಾನದ ಮೂಲದವರೆಂದು  ತಿಳಿದುಬಂದಿದೆ.

ಸಲಿಂಗಿಗಳೇ ಟಾರ್ಗೆಟ್
ಪ್ರಸ್ತುತ ಉಗ್ರ ದಾಳಿಗೆ ತುತ್ತಾಗಿರುವ ಒರ್ಲಾಂಡೋ ನೈಟ್ ಕ್ಲಬ್ ಸಲಿಂಗಿಗಳ ಕ್ಲಬ್ ಆಗಿದ್ದು, ಸಲಿಂಗಿಗಳು ಪರಸ್ಪರ ಮುತ್ತಿಟ್ಟುಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಸಲಿಂಗಿಗಳ ವಿಚಾರದಲ್ಲಿ  ಐಸಿಸ್ ಮೊದಲಿನಿಂದಲೂ ಕಡು ವಿರೋಧಿ ನಿಲುವು ಹೊಂದಿರುವ ಹಿನ್ನೆಲೆಯಲ್ಲಿ ಇದೇ ಸಂಘಟನೆಗೆ ಸೇರಿದ ಒಮರ್ ಮಾಟಿನ್ ದಾಳಿ ನಡೆಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ  ಈ ಹಿಂದೆ ನೈಟ್ ಕ್ಲಬ್ ಆಗಮಿಸಿದ್ದ ಒಮರ್ ಮಾಟಿನ್ ಸಲಿಂಗಿಗಳ ವಿರುದ್ಧ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಮೃತ ಉಗ್ರನ ತಂದೆ  ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕೆಲ ದಿನಗಳ ಹಿಂದೆ ಒಮಪ್ ಸಲಿಂಗಿ ಕ್ಲಬ್ ಗೆ ತೆರಳಿದ್ದ ಈ ವೇಳೆ ಅವರು ಪರಸ್ಪರ ಮುತ್ತಿಟ್ಟುಕೊಳ್ಳುವುದನ್ನು ನೋಡಿ ಬಹಿರಂಗವಾಗಿಯೇ ಸಿಟ್ಟಿಗೆದ್ದಿದ್ದ  ಎಂದು ಹೇಳಿದ್ದಾರೆ.

ಅವಳಿ ವಾಣಿಜ್ಯ ಕಟ್ಟಡಗಳ ಮೇಲೆ ನಡೆದ ಭೀಕರ 9/11 ಉಗ್ರ ದಾಳಿ ಬಳಿಕ ಅಮೆರಿಕದಲ್ಲಿ ನಡೆದ ಮೊದಲ ಉಗ್ರ ದಾಳಿ ಇದಾಗಿದ್ದು, ಭಾನುವಾರ ಫ್ಲೋರಿಡಾದ ಒರ್ಲಾಂಡೋದಲ್ಲಿರುವ ಸಲಿಂಗಿ  ಕ್ಲಬ್ ಮೇಲೆ ಇಸಿಸ್ ಉಗ್ರ ಸಂಘಟನೆ ಉಗ್ರನೊಬ್ಬ ತನ್ನ ಸ್ವಯಂ ಚಾಲಿತ ಬಂದೂಕಿನ ಮೂಲಕ ಸಿಡಿಸಿದ ಗುಂಡಿನ ಮಳೆಯಿಂದಾಗಿ 50ಕ್ಕೂ ಹೆಚ್ಚು ಮಂದಿ ಅಮಾಯಕರು ಅಸು ನೀಗಿದ್ದಾರೆ.  

ಇದು 1949ರ ಬಳಿಕ ಅಮೆರಿಕದಲ್ಲಿ ನಡೆದ ಅತ್ಯಂತ ಭೀಕರ ಗುಂಡಿನ ದಾಳಿಯಾಗಿದ್ದು, ಶನಿವಾರ ಬೆಳಗಿನ ಜಾವ 2 ಗಂಟೆಗೆ ಕ್ಲಬ್ ಬಾಗಿಲು ಮುಚ್ಚುವ ಸಂದರ್ಭದಲ್ಲಿ ಆತ್ಮಾಹುತಿ ದಾಳಿಗೆ  ಸಿದ್ಧನಾಗಿ ಬಂದಿದ್ದ ಉಗ್ರ ಏಕಾಏಕಿ ಡ್ಯಾನ್ಸ್ ಕೊಠಡಿಯತ್ತ  ನುಗ್ಗಿ ಗುಂಡಿನ ದಾಳಿ ನಡೆಸಿದ್ದಾನೆ. ದಿಢೀರ್ ನಡೆದ ಈ ದಾಳಿಯಲ್ಲಿ  50 ಮಂದಿ ಸ್ಥಳದಲ್ಲಿ ಸಾವನ್ನಪ್ಪಿದರೆ 50ಕ್ಕೂ ಹೆಚ್ಚು ಜನರು  ಗಾಯಗೊಂಡರು. ಈ ಸಂದರ್ಭದಲ್ಲಿ ಕೆಲವರನ್ನು ಹಂತಕ ಒತ್ತೆಯಾಳಾಗಿಟ್ಟುಕೊಂಡಿದ್ದ ಎಂದು ಫ್ಲೋರಿಡಾ ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ  ಪೊಲೀಸರು ಸತತ 4 ಗಂಟೆಗಳ ಕಾಲ ಗುಂಡಿನ ಕಾಳಗ ನಡೆಸಿ ಹಂತಕನನ್ನು ಹತ್ಯೆಗೈದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ